ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ
ಉಡುಪಿ, ಜೂ.2: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ವತಿಯಿಂದ 2020ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆ/ಸೃಜನಾತ್ಮಕ/ವ್ಯಂಗಚಿತ್ರ/ಸ್ಥೂಲ ಚಿತ್ರ, ಪ್ರಬಂಧ ಸ್ವರ್ಧೆ, ಬ್ಲಾಗಿಂಗ್, ಡಿ.ಐ.ವೈ ವಿಡಿಯೋ ಸ್ಪರ್ಧೆಯನ್ನು ಹಾಗೂ ಜೀವ ವೈವಿಧ್ಯತೆಯ ಕುರಿತು ವೆಬಿನಾರ್‌ನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ವಿವರ ಹೀಗಿದೆ. ಚಿತ್ರಕಲೆ/ಸೃಜನಾತ್ಮಕ/ವ್ಯಂಗಚಿತ್ರ/ಸ್ಥೂಲ ಚಿತ್ರ (ವಯೋಮಿತಿ 3-6ವರ್ಷಗಳು, 7-12ವರ್ಷ ಹಾಗೂ 13-18ವರ್ಷಗಳು) ಪ್ರಬಂಧ ಸ್ವರ್ಧೆ (500 ಪದಗಳಿಗೆ ಮೀರದಂತೆ ಬರೆಯಬೇಕು) ವಯೋಮಿತಿ 7-12ವರ್ಷಗಳು, 13-18ವರ್ಷಗಳು, ಬ್ಲಾಗಿಂಗ್(ವಯೋಮಿತಿ 13ರಿಂದ 18ವರ್ಷ), ಡಿ.ಐ.ವೈ ವಿಡಿಯೋ, ಹೈಡ್ರೋಪೋನಿಕ್ಸ್, ವರ್ಟಿಕಲ್‌ಗಾರ್ಡನ್, ಸಾಬೂನು ಮತ್ತು ಸ್ಯಾನಿಟೈಸರ್, ಕಾಂಪೋಸ್ಟ್ ನಿರ್ವಹಣೆ, ವೈವ್ ಕಾಂಪೋಸ್ಟ್, ಪಕ್ಷಿ ಸಂರಕ್ಷಣೆ, ಪರಿಸರ ಸ್ನೇಹಿಕಲೆ ಮತ್ತು ಕರವಸ್ತ್ರಗಳನ್ನು ಮಾಡುವುದು, ಮರಳುಕಲೆ ಕಥೆ ಹೇಳುವುದು, ಮಾಸ್ಕ್ ತಯಾರಿಸುವುದು, ಖಾದ್ಯ ತಯಾರಿಕೆ, ಇ-ತ್ಯಾಜ್ಯ ವಿಡಿಯೋ, ಪರಿಸರ ಸ್ನೇಹಿ ಅಟಿಕೆಗಳು, ಮಾಸ್ಕ ವಿಲೇವಾರಿ, ತರಕಾರಿ ಶುಚಿಗೊಳಿಸುವುದು ಇತ್ಯಾದಿ. ಹಾಗೂ ಜೀವ ವೈವಿಧ್ಯತೆಯ ಕುರಿತಾಗಿ ವೆಬಿನಾರ್ ಸ್ಪರ್ಧೆ ಆಯೋಜಿಸಲಾಗಿದೆ.
ಜೂನ್ 1ರಿಂದ 30ರವರೆಗೆ ವಿವಿಧ ವಯೋುತಿಯವರು ಆನ್‌ಲೈನ್ ಮೂಲಕ ಹೆಸರನ್ನು ನೊಂದಾಯಿಸಿ ಈ ಸ್ವರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಉಡುಪಿಯ ಪರಿಸರ ಅಧಿಕಾರಿ ವಿನಂತಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿ ವೆಬ್‌ಸೈಟ್: www.kspcb.gov.in-ನಲ್ಲಿ ಲಭ್ಯವಿರುತ್ತದೆ ಎಂದು ಉಡುಪಿ ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.





