ಜಮ್ಮು-ಕಾಶ್ಮೀರ: ಮೂವರು ಜೈಶ್ ಉಗ್ರರು ಹತ
ಹೊಸದಿಲ್ಲಿ/ಶ್ರೀನಗರ,ಜೂ.3: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಜೈಶ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಹತರಾಗಿದ್ದಾರೆ.
ಎನ್ಕೌಂಟರ್ನಲ್ಲಿ ಭದ್ರತಾ ಪಡೆಯ ಓರ್ವ ಯೋಧ ಗಾಯಗೊಂಡಿದ್ದಾರೆ.
ಪುಲ್ವಾಮದ ಹಳ್ಳಿಯಲ್ಲಿ ಸೇನೆ, ಪೊಲೀಸ್ ಹಾಗೂ ಸಿಆರ್ಪಿಎಫ್(ಕೇಂದ್ರೀಯ ಮೀಸಲು ಪೊಲೀಸ್ ಪಡೆ)ಜಂಟಿ ಕಾರ್ಯಾಚರಣೆ ನಡೆಸಿದ್ದವು.
ಶಸ್ತ್ರಸಜ್ಜಿತ ಮೂವರು ಪಾಕಿಸ್ತಾನದ ಉಗ್ರರನ್ನು ಕೊಂದು ಹಾಕಿರುವ ಭಾರತೀಯ ಸೇನೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಎಲ್ಒಸಿ ದಾಟಲು ಯತ್ನಿಸುತ್ತಿದ್ದ ಉಗ್ರರ ಯತ್ನವನ್ನು ವಿಫಲಗೊಳಿಸಿತ್ತು ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿದ್ದವು.
Next Story