Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳು,...

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರ ಸಂಚಾರಕ್ಕೆ ಅವಕಾಶ

ಮಾರ್ಗಸೂಚಿ ಪ್ರಕಟಿಸಿದ ದ.ಕ. ಜಿಲ್ಲಾಧಿಕಾರಿ

ವಾರ್ತಾಭಾರತಿವಾರ್ತಾಭಾರತಿ3 Jun 2020 5:42 PM IST
share
ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರ ಸಂಚಾರಕ್ಕೆ ಅವಕಾಶ

ಮಂಗಳೂರು: ಕೊರೋನ ವೈರಸ್ ಭೀತಿಯಿಂದ ತಡೆಯಾಗಿದ್ದ ಮಂಗಳೂರು – ಕಾಸರಗೋಡಿನ ಮಧ್ಯೆಯ ನಿತ್ಯ ಸಂಚಾರಕ್ಕೆ ಈಗ ಅವಕಾಶ ಸಿಕ್ಕಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ಪಾಸ್ ಬಳಸಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ನೀಡಿದ್ದಾರೆ.

ಕಾಸರಗೋಡಿನಲ್ಲಿರುವವರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಸಂಚರಿಸುತ್ತಾರೆ. ಇಂತವರಿಗೆ ಪಾಸ್ ಬಳಸಿ ನಿತ್ಯ ಸಂಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ಕಲ್ಪಿಸಿದರು.

Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚಿಸಲಾಗಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ಅವಕಾಶ ನೀಡಲಾಗಿದೆ. ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಪ್ರಯಾಣಿಕರು ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿರಲಿದೆ ಎಂದು ಪ್ರಕಟನೆ ತಿಳಿಸಿದೆ. 

ಕಾಸರಗೋಡು ಜಿಲ್ಲಾಧಿಕಾರಿ ಆದೇಶ

ಇಂದಿನಿಂದ (ಜೂ.3) ಅಂತರ್ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾಧಿಕಾರಿ ಆದೇಶ ಹೊರಡಿಸಿರುತ್ತಾರೆ.

1.ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಬಯಸುವ ವ್ಯಕ್ತಿಗಳು ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ EMERGENCY Pass ಗಾಗಿ ನೋಂದಾವಣೆ ನಡೆಸಬೇಕಾಗಿದೆ ಮತ್ತು ಅದಕ್ಕೆ INTERSTATE TRAVEL ON DAILY BASIS ಎಂಬ ಕಾರಣವನ್ನು ನಮೂದಿಸಬೇಕಾಗಿದೆ.

2.ಈ  ಆನ್ಲೈನ್ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ  Additional District Magistrate ಕಾಸರಗೋಡು ಅಥವಾ DIVISIONAL MAGISTRATE ಕಾಞಂಗಾಡ್, ಇವರು ಪಾಸ್ ಗಳನ್ನು ವಿತರಿಸಲು ಆದೇಶ ನೀಡಲಿರುವರು.

3. ಈ ಪಾಸ್ ಗಳಿಗೆ 28 ದಿವಸಗಳ ಅವಧಿ ಇರುತ್ತವೆ.

4. ಈ ಪಾಸ್ ಗಳನ್ನು ವಿತರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಾಸರಗೋಡು/ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಕಾಞಂಗಾಡ್ ರವರು Comply with the direction in the order of the DISTRICT COLLECTOR dated on 02-06-2020 vide order No 1331/2020/KL ಎಂದು ನಮೂದಿಸಬೇಕಾಗಿದೆ. ಈ ಪಾಸ್ ಒದಗಿಸಿದ ಬಳಿಕ , ಪಾಸ್ ನ ಸಮಗ್ರ ಮಾಹಿತಿಗಳನ್ನು ಚೆಕ್ ಪೋಸ್ಟ್ ಸಮೀಪ ಕ್ಯಾಂಪ್ ನಡೆಸುತ್ತಿರುವ ಮಂಜೇಶ್ವರ ತಹಶೀಲ್ದಾರ್ ರವರ ಸಮಕ್ಷಮ ನೀಡಬೇಕಿದೆ.
ವ್ಯಕ್ತಿಯ ಹೆಸರು, ವಿಳಾಸ, ಫೋನ್ ನಂಬರ್, ಪ್ರವೇಶಿಸುವ ದಿನಾಂಕ, ಮರಳಿ ಹೋಗುವ ದಿನಾಂಕ ಇತ್ಯಾದಿ ಇಲ್ಲಿ ಸಮರ್ಪಿಸಬೇಕಿದೆ.

6. ರೆಜಿಸ್ಟರ್ ನಲ್ಲಿ ಅನುಕ್ರಮವಾಗಿ ಪಾಸ್ ನಂಬರ್ ನಮೂದಿಸಬೇಕಾಗಿದೆ.

7. ಪಾಸ್ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಹಾಜರಾಗಿ, ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್19 ಪರಿಶೋಧನೆಗೆ ಒಳಪಡಬೇಕಿದೆ. ಥರ್ಮಲ್ ಸ್ಕ್ಯಾನರ್ ಮುಂತಾದ ಪರಿಶೋಧನಾ ಉಪಕರಣಗಳ ಮೂಲಕ ಜ್ವರ ಇತ್ಯಾದಿ ಕೋವಿಡ್ ಲಕ್ಷಣಗಳ ಪ್ರಾಥಮಿಕ ಪರೀಕ್ಷೆ ಅಲ್ಲಿ ನಡೆಯಲಿದೆ. ಈ ಕೌಂಟರ್ ಬಳಿ ಇರುವ ಇನ್ನೊಂದು ಕೌಂಟರ್ ನಲ್ಲಿ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ಮರಳುವಾಗ ದಿನಾಂಕ ನಮೂದಿಸಿ ‌ಸಹಿ ಹಾಕಬೇಕಿದೆ.

ಮೇಲಿನ ಎಲ್ಲಾ ನಡಾವಳಿಗಳೂ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸುವಾಗ ಕಡ್ಡಾಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X