ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಬಿಜೆಪಿ ನಾಯಕಿ: ವಿಡಿಯೋ ವೈರಲ್
ಹೊಸದಿಲ್ಲಿ: ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅಧಿಕಾರಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
2019ರಲ್ಲಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೊನಾಲಿ ಫೋಗಟ್ ಬಿಜೆಪಿಯಿಂದ ಕಣಕ್ಕಿಳಿದು ಸೋಲನುಭವಿಸಿದ್ದರು. ಶುಕ್ರವಾರ ಅವರು ರೈತರ ಮಾರುಕಟ್ಟೆಗೆ ಭೇಟಿ ನೀಡಿದ್ದು, ರೈತರು ನೀಡಿದ್ದ ದೂರಿನನ್ವಯ ಇಲ್ಲಿನ ಸಮಿತಿಯ ಸದಸ್ಯ ಸುಲ್ತಾನ್ ಸಿಂಗ್ ಬಳಿ ಮಾತನಾಡಲು ಹೋಗಿದ್ದರು. ಈ ಸಂದರ್ಭ ಆತ ಆಕೆಯನ್ನು ನಿಂದಿಸಿದ್ದ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಕೋಪಗೊಂಡ ಆಕೆ ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿದ್ದಾರೆ. ಆಕೆ ಥಳಿಸುತ್ತಿರುವಂತೆ ಆ ವ್ಯಕ್ತಿ ಬಿಟ್ಟು ಬಿಡುವಂತೆ ಕೇಳಿಕೊಳ್ಳುವುದು ಮತ್ತು ದೂರುಗಳನ್ನು ಆಲಿಸುವುದಾಗಿ ಹೇಳುವುದು ಕೇಳಿಸುತ್ತದೆ. ನಂತರ ಸೊನಾಲಿ ಫೋಗಟ್ ಪೊಲೀಸರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
All u sickos asking how can she hit a govt official. Can a govt official on duty denigrate a woman ?
— Kasturi Shankar (@KasthuriShankar) June 5, 2020
Sonali Phogat gave it good to that cheapo. Sultan Singh was guilty, he deserved it, that is why he is pleading and police and public are watching calmly. 1/2 pic.twitter.com/XqOyzUSGFq