ಆರೋಪಿಗೆ ಕೊರೋನ ದೃಢ: ಸ್ಯಾನಿಟೈಸ್ ಮಾಡಿ ಮೆಯೋಹಾಲ್ ಕೋರ್ಟ್ ಸ್ವಚ್ಛಗೊಳಿಸಿದ ಸಿಬ್ಬಂದಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.6: ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯೊಬ್ಬನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇಯೋ ಹಾಲ್ ಕೋರ್ಟ್ನ ಶನಿವಾರದ ಕಲಾಪಗಳನ್ನು ರದ್ದುಪಡಿಸಲಾಗಿತ್ತು.
ಜೀವನ್ಭೀಮಾ ನಗರ ಠಾಣೆ ಪೊಲೀಸರು ಆರೋಪಿಯನ್ನು ಜೂ.1ರ ಸಂಜೆ 4.45ಕ್ಕೆ 10ನೆ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ವೇಳೆ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಆರೋಪಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೆಯೋ ಹಾಲ್ ಕೋರ್ಟ್ನ ಎಲ್ಲ ಕಲಾಪಗಳನ್ನು ರದ್ದುಪಡಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಅವರು ನೋಟಿಸ್ ಹೊರಡಿಸಿದ್ದರು.
ನ್ಯಾಯಾಲಯದ ಸಂಪೂರ್ಣ ಸಮುಚ್ಚಯ ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಕಲಾಪಗಳನ್ನು ರದ್ದುಪಡಿಸಲಾಗಿತ್ತು. ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು.
Next Story