ಪರಿಸರ ದಿನಾಚರಣೆಯ ಅಂಗವಾಗಿ ಡಿವೈಎಫ್ಐ ನಿಂದ ಗಿಡ ವಿತರಣೆ

ಮಂಗಳೂರು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಡಿವೈಎಫ್ಐ ಬಂಟ್ವಾಳ ತಾಲೂಕು ಸಮಿತಿಯಿಂದ ಬಂಟ್ವಾಳ ಕೆಳಗಿನ ಮಂಡಾಡಿಯಲ್ಲಿ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ರಾಜ ಚೆಂಡ್ತಿಮಾರ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಹಿತ್ತಲು ಮತ್ತು ಪರಿಸರಗಳಲ್ಲಿ ಗಿಡ ನೆಡಬೇಕು ಆ ಮೂಲಕ ಪ್ರಕೃತಿಯನ್ನು ಉಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಫ್.ಐ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ , ಉಪಾಧ್ಯಕ್ಷ ಸಾಧಿಕ್ ಬಂಟ್ವಾಳ, ದೇವದಾಸ್ ಕುಲಾಲ್, ಕಾರ್ಮಿಕ ಮುಖಂಡರಾದ ಉದಯ ಕುಮಾರ್ ಬಂಟ್ವಾಳ, ರಾಮಣ್ಣ ವಿಟ್ಲ, ಪ್ರಭಾಕರ ದೈವಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಬಂಟ್ವಾಳ ಪರಿಸರದ ನಾಗರಿಕರಿಗೆ ಸಸಿಗಳನ್ನು ವಿತರಿಸಲಾಯಿತು.
Next Story









