ಬಳ್ಳಾರಿ: ಮೂವರು ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ದೃಢ
ಬಳ್ಳಾರಿ, ಜೂ.7: ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಇಲ್ಲಿನ ಟಿ.ಬಿ.ಡ್ಯಾಂ ಠಾಣೆಯ ಸಿಪಿಐ, ಹೊಸಪೇಟೆ ಪಟ್ಟಣ ಠಾಣೆ ಮತ್ತು ಮರಿಯಮ್ಮನ ಹಳ್ಳಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಸೋಂಕು ತಗಲಿದ್ದು, ಈ ಮೂವರನ್ನು ಬಳ್ಳಾರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಪೊಲೀಸರೊಂದಿಗೆ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವ ಕಾರ್ಯ ನಡೆದಿದೆ. ಒಟ್ಟು ಬಳ್ಳಾರಿಯಲ್ಲಿ ಶನಿವಾರ ಆರು ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನ ಧೃಡಪಟ್ಟವರ ಸಂಖ್ಯೆ 60ಕ್ಕೇರಿದೆ.
Next Story