ಈ ರಾಜ್ಯದಲ್ಲಿ ಈವರೆಗೆ 33 ಪೊಲೀಸರ ಬಲಿ: 2,562 ಸಿಬ್ಬಂದಿಗೆ ಸೋಂಕು
ಕೊರೋನ ವೈರಸ್

ಮುಂಬೈ,ಜೂ.7: ಓರ್ವ ಅಧಿಕಾರಿ ಸೇರಿದಂತೆ ಕನಿಷ್ಠ 33 ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗಳು ಈವರೆಗೆ ಕೊರೋನ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ರವಿವಾರ ಇಲ್ಲಿ ತಿಳಿಸಿದರು.
ಈವರೆಗೆ 2,562 ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದು,ಈ ಪೈಕಿ ಮುಂಬೈ ಪೊಲೀಸ್‌ನ 18 ಸಿಬ್ಬಂದಿಗಳು ಸೇರಿದಂತೆ 33 ಜನರು ಮೃತಪಟ್ಟಿದ್ದಾರೆ. ಈಗಿರುವಂತೆ ರಾಜ್ಯ ಪೊಲೀಸ್ ಪಡೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,497 ಆಗಿದ್ದು,ಈ ಪೈಕಿ 196 ಅಧಿಕಾರಿಗಳು ಸೇರಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ 260 ಪೊಲೀಸರ ಮೇಲೆ ಹಲ್ಲೆಗಳು ನಡೆದಿದ್ದು,ಇದಕ್ಕಾಗಿ 841 ಜನರನ್ನು ಬಂಧಿಸಲಾಗಿದೆ. ಶೇ.86ರಷ್ಟು ಪೊಲೀಸರು ಹಲ್ಲೆಗಳಿಂದ ಗಾಯಗೊಂಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ 45 ವೈದ್ಯಕೀಯ ವೃತ್ತಿಪರರ ಮೇಲೂ ದಾಳಿಗಳು ನಡೆದಿವೆ ಎಂದೂ ಅಧಿಕಾರಿ ತಿಳಿಸಿದರು.
Next Story





