ನಾಳೆಯಿಂದ ಎಎಸ್‌ಐ ಅಧೀನದ ಸ್ಮಾರಕಗಳು ವೀಕ್ಷಣೆಗೆ ಲಭ್ಯ

ಹೊಸದಿಲ್ಲಿ,ಜೂ.7: ಭಾರತೀಯ ಪುರಾತತ್ವ ಸರ್ವೆ ನಿರ್ವಹಿಸುತ್ತಿರುವ ತನ್ನ 3,000ಕ್ಕೂ ಅಧಿಕ ರಕ್ಷಿತ ಸ್ಮಾರಕಗಳನ್ನು ಜೂ.8ರಿಂದ ಪ್ರವಾಸಿಗಳ ವೀಕ್ಷಣೆಗೆ ಮುಕ್ತವಾಗಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ರವಿವಾರ ಹಸಿರು ನಿಶಾನೆಯನ್ನು ತೋರಿಸಿದೆ.
ಸ್ಮಾರಕಗಳ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿರುವ ಎಲ್ಲ ಕೊರೋನ ವೈರಸ್ ಶಿಷ್ಟಾಚಾರಗಳನ್ನು ಪಾಲಿಸಲಿದ್ದಾರೆ ಎಂದು ಸಚಿವ ಪ್ರಹ್ಲಾದ ಪಟೇಲ್ ಅವರು ತಿಳಿಸಿದರು.
ಕೇಂದ್ರದ ರಕ್ಷಣೆಯಲ್ಲಿರುವ 3,691 ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳನ್ನು ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾ.17ರಿಂದ ಮುಚ್ಚಲಾಗಿತ್ತು.
ಈ ಸ್ಮಾರಕಗಳಿಗೆ ಭೇಟಿ ನೀಡುವವರಿಗೆ ಇ-ಟಿಕೆಟ್‌ಗಳು ಮತ್ತು ಮಾಸ್ಕ್‌ಗಳು ಕಡ್ಡಾಯವಾಗಿರಲಿವೆ ಎಂದು ಮೂಲಗಳು ತಿಳಿಸಿವೆ.
Next Story





