ಪ್ರಮುಖ ರಸ್ತೆಯ ಗುಂಡಿ ಮುಚ್ಚುವಂತೆ ಆಗ್ರಹ

ಉಡುಪಿ, ಜೂ.7: ನಗರದ ವಿದ್ಯಾಸಮುದ್ರ ಮಾರ್ಗವು ಕಲ್ಸಂಕ ಸಮೀಪ ಉಡುಪಿ- ಮಣಿಪಾಲ ರಾಷ್ಟೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಮಧ್ಯೆ ಅಪಾಯ ಕಾರಿಯಾಗಿರುವ ಬೃಹತ್ ಗುಂಡಿಯೊಂದು ನಿರ್ಮಾಣವಾಗಿದೆ.
ನಡು ರಸ್ತೆಯಲ್ಲಿಯೇ ನಿರ್ಮಾಣವಾಗಿರುವ ಈ ದೊಡ್ಡದಾದ ಗುಂಡಿ ಯಿಂದಾಗಿ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಎಡವಿ ಬಿದ್ದಿರುವ ಘಟನೆಗಳು ಇಲ್ಲಿ ನಡೆದಿವೆ. ಹೊಂಡದಲ್ಲಿ ತುಂಬಿರುವ ಕೊಳಚೆ ನೀರಿನಿಂದ ಪಾದಚಾರಿಗಳಿಗೂ ಸಮಸ್ಯೆಗಳಾಗುತ್ತಿವೆ.
ಆದುದರಿಂದ ಸಂಬಂಧಪಟ್ಟವರು ಅವಘಡಗಳಿಗೆ ಕಾರಣವಾಗುತ್ತಿರುವ ರಸ್ತೆ ಹೊಂಡವನ್ನು ಮುಚ್ಚುವಂತೆ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.
Next Story





