ಮಲಾರ್ ಹೆಲ್ಪ್ಲೈನ್: ಪದಾಧಿಕಾರಿಗಳ ಆಯ್ಕೆ

ಶಮೀರ್ ಟಿಪ್ಪುನಗರ
ಮಂಗಳೂರು, ಜೂ.7: ಪಾವೂರು ಗ್ರಾಮದ ಮಲಾರ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ‘ಮಲಾರ್ ಹೆಲ್ಪ್ಲೈನ್’ ಸಂಸ್ಥೆಯ ಎರಡನೆ ವರ್ಷದ ಸಭೆಯು ಅಧ್ಯಕ್ಷ ರಿಝ್ವಾನ್ ಅರಸ್ತಾನ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಮಲಾರ್ ಹೆಲ್ಪ್ಲೈನ್ನ ನೂತನ ಅಧ್ಯಕ್ಷರಾಗಿ ಶಮೀರ್ ಟಿಪ್ಪುನಗರ, ಸಂಚಾಲಕರಾಗಿ ಕಬೀರ್ ಮಲಾರ್, ಉಪಾಧ್ಯಕ್ಷರಾಗಿ ಸಮದ್ ಜಿ.,ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಎಂಕೆ, ಜೊತೆ ಕಾರ್ಯದರ್ಶಿಯಾಗಿ ಎಂಪಿ ಆಶಿರ್, ಕೋಶಾಧಿಕಾರಿಯಾಗಿ ರಿಝ್ವಾನ್ ಅರಸ್ತಾನ ಆಯ್ಕೆಯಾದರು.
ಸಭೆಯಲ್ಲಿ ‘ನಾಯಕತ್ವ ಹಾಗೂ ಜವಾಬ್ದಾರಿ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಝಾಹಿದ್ ಮಲಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುನೀರ್ ಸುಫೈದ್ ಚುನಾವಣಾ ವೀಕ್ಷಕರಾಗಿ ಪಾಲ್ಗೊಂಡಿದ್ದರು. ಹಿರಿಯರಾದ ಕೆಎಂ ಹಸನಬ್ಬ ಉಪಸ್ಥಿತರಿದ್ದರು. ಸಮದ್ ಜಿ. ವಂದಿಸಿದರು.
Next Story





