'ಸಿದ್ಧಿ' ಜನಾಂಗದವರಿಗೆ ಎಸ್ಟಿ ಮೀಸಲು ಸೌಲಭ್ಯ: ರಾಜ್ಯ ಸರಕಾರ ಸುತ್ತೋಲೆ
ಬೆಂಗಳೂರು, ಜೂ. 7: ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ 'ಸಿದ್ಧಿ' ಜನಾಂಗದವರಿಗೆ ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಸೌಲಭ್ಯಗಳನ್ನು ವಿಸ್ತರಿಸಲು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
2020ರ ಮಾರ್ಚ್ 19ರಂದು ಕೇಂದ್ರ ಸಂವಿಧಾನಕ್ಕೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯದಲ್ಲಿರುವ `ಪರಿವಾರ' ಮತ್ತು `ತಳವಾರ' ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದೆ. ಅಲ್ಲದೆ, 'ಸಿದ್ಧಿ' ಸೇರಿದಂತೆ ಈ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಸಕ್ಷಮ ಪ್ರಾಧಿಕಾರಿಗಳ ಮೇಲ್ಕಂಡ ಅಂಶಗಳನ್ನು ಖಚಿತಪಡಿಸಿಕೊಂಡು ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ರಾಜಶ್ರೀ ಕುಲಕರ್ಣಿ ಸುತ್ತೋಲೆ ಹೊರಡಿಸಿದ್ದಾರೆ.
Next Story





