ಎರಡು ಆಸನಗಳ ವಿಮಾನ ಪತನ: ಟ್ರೈನಿ ಪೈಲಟ್, ತರಬೇತುದಾರ ಸಾವು
ಧೆಂಕನಲ್(ಒಡಿಶಾ), ಜೂ.8: ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಸೋಮವಾರ ಎರಡು ಆಸನದ ವಿಮಾನವೊಂದು ಪತನಗೊಂಡ ಪರಿಣಾಮ ಟ್ರೈನಿ ಪೈಲಟ್ ಹಾಗೂ ಪೈಲಟ್ನ ತರಬೇತುದಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಬಿರಸಲಾದಲ್ಲಿರುವ ಸರಕಾರಿ ವಾಯುಮಾನ ತರಬೇತಿ ಸಂಸ್ಥೆಯ ತರಬೇತುದಾರ ವಿಮಾನ ಪತನಗೊಂಡಿದೆ ಎಂದು ಧಂಕನಲ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಕೆ ನಾಯಕ್ ಹೇಳಿದ್ದಾರೆ.
ಇಬ್ಬರನ್ನು ಹತ್ತಿರದ ಕಾಮಾಕ್ಯನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ,ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಹಿರಿಯ ಪೊಲೀಸರು ಹಾಗೂ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story