ಉನ್ನತ ಶಿಕ್ಷಣ ವ್ಯವಸ್ಥೆಗೆ ಅಲ್ ಬಿರ್ರ್ ಖ್ಯಾತಿ ಪಡೆಯುತ್ತಿದೆ: ಇರ್ಷಾದ್ ದಾರಿಮಿ
ಬಿ.ಸಿ.ರೋಡ್ ತಲಪಾಡಿಯಲ್ಲಿ ಅಲ್ ಬಿರ್ರ್ ಪ್ರಿ ಸ್ಕೂಲ್ ಉದ್ಘಾಟನೆ

ಬಂಟ್ವಾಳ, ಜೂ. 8: ಒಂದೇ ಸೂರಿನಲ್ಲಿ ಉತ್ತಮ ಗುಣಮಟ್ಟದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯು ಖ್ಯಾತಿ ಪಡೆಯುತ್ತಿದೆ. ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ಅವಿಷ್ಕರಿಸಲ್ಪಟ್ಟ ಈ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಉನ್ನತ ಪಠಣ ಬೋಧನಾ ರೀತಿ ಭಾರೀ ಬೇಡಿಕೆಯನ್ನು ಪಡೆಯುತ್ತಿದೆ ಎಂದು ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ತಿಳಿಸಿದ್ದಾರೆ.
ಮಿತ್ತಬೈಲ್ ಉಸ್ತಾದ್ ಎಜುಕೇಶನಲ್ ಟ್ರಸ್ಟ್ ನಿಂದ ಬಿ.ಸಿ.ರೋಡ್ ತಲಪಾಡಿಯ ಮಫತ್ಲಾಲ್ ನಲ್ಲಿ ನೂತನವಾಗಿ ಆರಂಭಗೊಂಡಿರುವ ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಶಾಲೆಯನ್ನು ರವಿವಾರ ಉದ್ಘಾಸಿದ ಬಳಿಕ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ನಡೆಯುವ ಈ ಶಾಲೆಯ ಕಲಿಕಾ ಕ್ರಮ ಇತರ ಶಾಲೆಗಳ ಕಲಿಕಾ ಕ್ರಮಕ್ಕಿಂತ ಭಿನ್ನವಾಗಿದೆ. ಸೂಕ್ತ ತರಬೇತಿ ಪಡೆದ ಬೋಧಕರಿಂದ ಲೌಕಿಕ ಶಿಕ್ಷಣದ ಜೊತೆಗೆ ಇಸ್ಲಾಮಿಕ್ ಶಿಕ್ಷಣವು ಒಟ್ಟೊಟ್ಟಿಗೆ ಸಿಗುವುದರಿಂದ ಈ ಶಿಕ್ಷಣ ಕ್ರಮವನ್ನು ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರು ಪ್ರೋತ್ಸಾಹಿಸಿದ್ದರು ಎಂದು ಅವರು ಹೇಳಿದರು.
ಇದೀಗ ಮಿತ್ತಬೈಲ್ ಪರಿಸರದ ತಲಪಾಡಿ ಮಫತಿಲಾಲ್ ನಲ್ಲಿ ಅಲ್ ಬಿರ್ರ್ ಶಿಕ್ಷಣ ಸಂಸ್ಥೆ ಆರಂಭಗೊಂಡಿರುವುದು ಖುಷಿಯ ವಿಷಯವಾಗಿದೆ. ಈಗಾಗಲೇ ಎಲ್.ಕೆ.ಜಿ., ಯು.ಕೆ.ಜಿ. ದಾಖಲಾತಿ ಆರಂಭಗೊಂಡಿದ್ದು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದೊಂದು ದೊಡ್ಡ ವಿದ್ಯಾ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ನುಡಿದರು.
ಅಲ್ ಬಿರ್ರ್ ಕರ್ನಾಟಕ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಮಾತನಾಡಿ, ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯು ಬಹುಮುಖ ಪ್ರತಿಭೆಗಳನ್ನು ಸೃಷ್ಟಿಸುತ್ತಿದೆ. ಅಲ್ ಬಿರ್ರ್ ಶಾಲೆಯಲ್ಲಿ ಕಲಿತ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಕುರ್ ಆನ್ ಪಾರಾಯಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಮಾಡಿರುವ ಸಾಧನೆ ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕೆಳಗಿನ ಮಿತ್ತಬೈಲ್ ಅರಫಾ ಮಸೀದಿಯ ಇಮಾಮ್ ಮುಹ್ಸಿನ್ ಫೈಝಿ ದುಅ ಮಾಡಿದರು. ಅತಿಥಿಗಳಾದ ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಝೆನಿತ್ ಅಹ್ಮದ್, ಫ್ಲಾಗ್ ಝಿರೊ ಡೈರೆಕ್ ಡಾ. ಮುಸ್ತಫಾ ಬಸ್ತಿಕೋಡಿ, ಪಾಲುದಾರರಾದ ಹಂಝ ಬಸ್ತಿಕೋಡಿ, ಶಾಕಿರ್ ಅಹ್ಮದ್, ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.






.jpeg)
.jpeg)

.jpeg)


