ಮಂಗಳೂರು: ಹೊಟೇಲ್‌ಗಳು ಭಾಗಶಃ ಆರಂಭ
ಮಂಗಳೂರು, ಜೂ.8: ರಾಜ್ಯ ಸರಕಾರದ ಸೂಚನೆಯಂತೆ ಸೋಮವಾರ ನಗರ ಸಹಿತ ದ.ಕ.ಜಿಲ್ಲೆಯಲ್ಲಿ ಮಧ್ಯಮ ಮತ್ತು ದೊಡ್ಡ ಮಟ್ಟದ ಹೋಟೆಲ್‌ಗಳು ಭಾಗಶಃ ಆರಂಭಗೊಂಡಿವೆ. ಆದರೆ ಬೆರೆಳೆಣಿಕೆಯ ಹೊಟೇಲುಗಳಲ್ಲಿ ಮಾತ್ರ ಸ್ಥಳದಲ್ಲೇ ತಿಂಡಿ-ತಿನಿಸು-ಊಟಗಳ ಪೂರೈಕೆಯಾಗುತ್ತಿವೆ. ಅಲ್ಲದೆ ಗ್ರಾಹಕರ ಸಂಖ್ಯೆಯು ಹೆಚ್ಚೇನೂ ಇರಲಿಲ್ಲ. ಬಹುತೇಕ ಹೊಟೇಲುಗಳಲ್ಲಿ ಅಡುಗೆ, ಕ್ಲೀನಿಂಗ್‌ಗೆ ಕೆಲಸಗಾರರ ಕೊರತೆ ಇತ್ತು. ಹಾಗಾಗಿ ಅನೇಕ ಹೊಟೇಲುಗಳು ಸೋಮವಾರ ಸಂಪೂರ್ಣವಾಗಿ ತೆರೆದಿಲ್ಲ.
ಹಂತ ಹಂತದ ಲಾಕ್‌ಡೌನ್ ಸಡಿಲಿಕೆಯ ಸಂದರ್ಭ ಸ್ಥಳದಲ್ಲೇ ಊಟ, ತಿಂಡಿ ತಿನ್ನಲು ಅವಕಾಶವಿರಲಿಲ್ಲ. ಆದರೆ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶವಿತ್ತು. ಸೋಮವಾರದಿಂದ ಕೆಲಸಗಾರರ ಕೊರತೆಯ ಮಧ್ಯೆಯೂ ಕೆಲವೇ ಕೆಲವು ಹೊಟೇಲು ಗಳಲ್ಲಿ ಗ್ರಾಹಕರಿಗೆ ಸ್ಥಳದಲ್ಲೇ ಊಟ-ತಿಂಡಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಮಂದಿ ಮಾತ್ರ ಸ್ಥಳದಲ್ಲೇ ಊಟ-ತಿಂಡಿ ತಿಂದರೆ ಅಧಿಕ ಸಂಖ್ಯೆಯ ಗ್ರಾಹಕರು ಎಂದಿನಂತೆ ಪಾರ್ಸೆಲ್‌ಗಳಿಗೆ ಮೊರೆ ಹೊಕ್ಕರು.
ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ವ್ಯವಹಾರ ನಡೆಸುವುದು ಅನಿವಾರ್ಯವಾದ ಕಾರಣ ಗ್ರಾಹಕರಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಹೊಟೇಲು ಮಾಲಕರು/ಕೆಲಸಗಾರರು ಸೂಚಿಸುತ್ತಿದ್ದರು. ಕೆಲವು ಹೊಟೇಲುಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗಿತ್ತು





