ಮಂಗಳೂರು: ಗೋಡೆ ಕುಸಿದು ಬಿದ್ದು ಆಟವಾಡುತ್ತಿದ್ದ ಮಗು ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು : ಮನೆಯ ಆವರಣ ಗೋಡೆ ಸಮೀಪ ಆಟವಾಡುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದ ಪರಿಣಾಮ 3 ವರ್ಷದ ಮಗು ಮೃತಪಟ್ಟ ಘಟನೆ ಮುನ್ನೂರು ಗ್ರಾಮದ ಸಂತೋಷನಗರದಲ್ಲಿ ಸೋಮವಾರ ನಡೆದಿದೆ.
ಮೃತ ಮಗುವನ್ನು ಅಶ್ರಫ್ ಎಂಬವರ ಪುತ್ರ ಐಮಾನ್( 3 ) ಎಂದು ಗುರುತಿಸಲಾಗಿದೆ. ಮನೆಯ ಆವರಣ ಗೋಡೆ ಸಮೀಪ ಆಟವಾಡುತ್ತಿದ್ದ ಮಗುವಿನ ಮೇಲೆ ಕಂಪೌಂಡ್ ಗೋಡೆ ಕುಸಿದುಬಿದ್ದ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ ಎಂದು ದೂರಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story





