ಕಾಸರಗೋಡು : ಇಂದು 8 ಮಂದಿಗೆ ಕೊರೋನ ಪಾಸಿಟಿವ್

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ 8 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ 109 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕೊರೋನ ಪಾಸಿಟಿವ್ ಆದವರಲ್ಲಿ ಮೂವರು ಕುವೈತ್ ನಿಂದ, ಮೂವರು ಮಹಾರಾಷ್ಟ್ರ ದಿಂದ, ಇಬ್ಬರು ದುಬೈಯಿಂದ ಆಗಮಿಸಿದವರು. ಕುವೈತ್ ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 49, 45, 41 ವರ್ಷದ ವ್ಯಕ್ತಿಗಳು, ದುಬೈಯಿಂದ ಆಗಮಿಸಿದ್ದ 42 ವರ್ಷದ ವ್ಯಕ್ತಿ, ಚೆರುವತ್ತೂರು ಪಂಚಾಯತ್ ನಿವಾಸಿ 30 ವರ್ಷದ ವ್ಯಕ್ತಿ, ಮಹಾರಾಷ್ಟ್ರ ದಿಂದ ಆಗಮಿಸಿದ್ದ ಮಂಗಲ್ಪಾಡಿ ನಿವಾಸಿ 60 ವರ್ಷದ ವ್ಯಕ್ತಿ, ಉದುಮಾ ಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ, ವಲಿಯ ಪರಂಬ ನಿವಾಸಿ 58 ವರ್ಷದ ವ್ಯಕ್ತಿ ಸೋಂಕು ಬಾಧಿತರು. ಇವರಲ್ಲಿ ಚೆರುವತ್ತೂರು, ವಲಿಯಪರಂಬ ನಿವಾಸಿಗಳು ರೂಂ ಕ್ವಾರೆಂಟೈನ್ ನಲ್ಲಿ, ಉಳಿದವರು ಸರಕಾರಿ ನಿಗಾದಲ್ಲಿದ್ದರು.
ಕೋವಿಡ್ ಸೋಂಕು ಖಚಿತಗೊಂಡು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5 ಮಂದಿ, ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಇಬ್ಬರು ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರ ದಿಂದ ಬಂದಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 39, 48 ವರ್ಷದ ವ್ಯಕ್ತಿಗಳು, ಪೈವಳಿಕೆ ಪಂಚಾಯತ್ ನಿವಾಸಿ 45 ವರ್ಷದ ವ್ಯಕ್ತಿ, ಕುತ್ತಿಕೋಲ್ ನಿವಾಸಿ 31 ವರ್ಷದ ವ್ಯಕ್ತಿ, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ, ಸಂಪರ್ಕ ಮೂಲಕ ಸೋಂಕು ತಗುಲಿದ್ದ ಈಸ್ಟ್ ಏಳೇರಿ ನಿವಾಸಿ 28 ವರ್ಷದ ನಿವಾಸಿ, ಕುವೈತ್ ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿ 33 ವರ್ಷದ ಮಹಿಳೆ ರೋಗದಿಂದ ಗುಣಮುಖರಾದವರು.
ಜಿಲ್ಲೆಯಲ್ಲಿ ಒಟ್ಟು 3820 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3324 ಮಂದಿ, ಆಸ್ಪತ್ರೆಗಳಲ್ಲಿ 496 ಮಂದಿ ನಿಗಾದಲ್ಲಿದ್ದಾರೆ. 224 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 11 ಮಂದಿ ಸೋಮವಾರ ಐಸೊಲೇಷನ್ ವಾರ್ಡ್ ಗಳಿಗೆ ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 8567 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಸೋಮವಾರ 30 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 293 ಮಂದಿಯ ಫಲಿತಾಂಶ ಲಭಿಸಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.







