ಉಡುಪಿ ಜಿಲ್ಲೆಯಾದ್ಯಂತ ಹೊಟೇಲ್, ಮಾಲ್‌ಗಳು ಪುನಾರಂಭ

ಉಡುಪಿ, ಜೂ.8: ರಾಜ್ಯ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ, ಅನು ಮತಿ ನೀಡಿರುವ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳಗಳ ಬಳಿಕ ಇಂದು ಜಿಲ್ಲೆಯಾದ್ಯಂತ ಹೊಟೇಲುಗಳು ಹಾಗೂ ಮಾಲ್‌ಗಳು ಪುನಾರಂಭ ಗೊಂಡಿವೆ. ಈ ಮೂಲಕ ಜಿಲ್ಲೆಯ ಜನಜೀವನ ಮತ್ತು ಆರ್ಥಿಕ ಚಟುವಟಿಕೆ ಗಳು ಬಹುತೇಕವಾಗಿ ಸಹಜ ಸ್ಥಿತಿಗೆ ಮರಳಿದಂತಾಗಿವೆ.
ಜಿಲ್ಲೆಯಲ್ಲಿರುವ ಸಸ್ಯಾಹಾರಿ, ಮಾಂಸಹಾರಿ ಹಾಗೂ ಮೀನಿನ ಹೊಟೇಲು ಗಳು ತೆರೆದಿದ್ದು, ಗ್ರಾಹಕರಿಗೆ ಪಾರ್ಸೆಲ್ ಬದಲು ಅಲ್ಲಿಯೇ ಕುಳಿತು ಊಟ ಉಪಹಾರ ಸೇವಿಸಲು ಅವಕಾಶ ಕಲ್ಪಿಸಿವೆ. ಜನ ಸಂಚಾರ ವಿರಳ ಮತ್ತು ಆರಂಭದ ದಿನಗಳಾಗಿ ರುವುದರಿಂದ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿರುವುದು ಕಂಡುಬಂತು.
ಅದೇ ರೀತಿ ನಗರದಲ್ಲಿರುವ ಸಿಟಿಸೆಂಟರ್ ಮಾಲ್‌ನಲ್ಲಿರುವ ಮಲ್ಪಿಬ್ರಾಂಡ್ ಶಾಪ್‌ಗಳು ಇಂದಿನಿಂದ ಕಾರ್ಯಾಚರಿಸಿವೆ. ಸೀಮಿತ ಸಂಖ್ಯೆಯಲ್ಲಿ ಸೇಲ್ ಮೆನ್‌ಗಳಿಂದ ಮಾಲ್‌ಗಳ ಶಾಪ್‌ಗಳನ್ನು ತೆರೆಯಲಾಗಿದೆ. ಹೆಚ್ಚಿನ ಶಾಪ್ ಗಳಲ್ಲಿ ಆಫರ್‌ಗಳನ್ನು ಸ್ಥಗಿತ ಗೊಳಿಸಲಾಗಿದೆ. ಎಲ್ಲ ಶಾಪ್‌ಗಳನ್ನು ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ಆದರೆ ಮೊದಲ ದಿನ ಮಾಲ್‌ಗಳಲ್ಲಿ ಜನರ ಸಂಖ್ಯೆ ತೀರಾ ವಿರಳವಾಗಿತ್ತು.








