ಉಡುಪಿ ಜಿಲ್ಲೆಯ 1640 ಮನೆಗಳು ಆನ್‌ಬ್ಲಾಕ್: ಸಚಿವ ಬೊಮ್ಮಾಯಿ
ಉಡುಪಿ, ಜೂ.8: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ 77190 ,ಮಾನವ ದಿನ ಸೃಷ್ಠಿಯಾಗಿದ್ದರೆ, ಈ ವರ್ಷ 2,10,000 ಮಾನವ ದಿನಗಳ ಸೃಷ್ಠಿ ಮಾಡುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಖಾತ್ರಿಯಲ್ಲಿ ಉತ್ತಮ ಪ್ರಗತಿಕಂಡು ಕೊಳ್ಳಲಾಗಿದೆ. ಹೊಸದಾಗಿ ಉದ್ಯೋಗ ಸೃಷ್ಠಿಗೆ ಅವಕಾಶ ಮಾಡಿಕೊಡ ಬೇಕು ಎಂಬುದಾಗಿ ಅಧಿಕಾರಿ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ವಸತಿ ಯೋಜನೆಗೆ ಸಂಬಂಧಿಸಿ ಕಳೆದ ಸರಕಾರದ ಅವಧಿಯಲ್ಲಿ ಬ್ಲಾಕ್ ಆಗಿದ್ದ 1640 ಮನೆಗಳನ್ನು ಆನ್‌ಬ್ಲಾಕ್ ಮಾಡಿ ಸರಕಾರ ಆದೇಶ ಹೊರಡಿಸಿ, ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉಡುಪಿ ತಾಲೂಕಿನಲ್ಲಿ 554, ಕುಂದಾಪುರ 713, ಕಾರ್ಕಳ 370 ಮನೆಗಳು ಸೇರಿವೆ ಎಂದರು.
Next Story





