ದಿಲ್ಲಿಯಲ್ಲಿ ಲಘು ಭೂಕಂಪ

ಹೊಸದಿಲ್ಲಿ, ಜೂ.8: ರಾಷ್ಟ್ರ ರಾಜಧಾನಿಯಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.1ರಷ್ಟಿತ್ತು. ಕೆಲವೆಡೆ ಲಘು ಕಂಪನದ ಅನುಭವವಾಗಿದೆ. ಕಳೆದ ಎರಡು ತಿಂಗಳಲ್ಲಿ ಒಂಬತ್ತನೇ ಬಾರಿಗೆ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿದೆ.
ಹರ್ಯಾಣದ ಗುರುಗ್ರಾಮ ಸಮೀಪದ ಇದರ ಕೇಂದ್ರಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಮಾರು 18 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ದಿಲ್ಲಿ, ನೋಯ್ಡಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತು.
ಕಳೆದ ಎಪ್ರಿಲ್‌ನಿಂದೀಚೆಗೆ ದಿಲ್ಲಿ ಹಾಗೂ ಸುತ್ತಮುತ್ತದ ಪ್ರದೇಶಗಳಲ್ಲಿ ಲಘು ಹಾಗೂ ಮಧ್ಯಮ ಪ್ರಮಾಣದ ಭೂಕಂಪ ಅನುಭವಕ್ಕೆ ಬಂದಿದೆ.
Next Story





