ಪಾಕ್ ಮಾಜಿ ಪ್ರಧಾನಿ ಅಬ್ಬಾಸಿಗೆ ಕೊರೋನ ದೃಢ

ಇಸ್ಲಾಮಾಬಾದ್,ಜೂ.8: ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್ ಕಖ್ಖಾನ್ ಅಬ್ಬಾಸಿ ಅವರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.
‘‘ಶಾಹಿದ್ ಕಖ್ಖಾನ್ ಅಬ್ಬಾಸಿ ಅವರಿಗೆ ಕೊರೋನವೈರಸ್ ಪಾಸಿಟಿವ್ ಬಂದಿದೆ. ಅವರನ್ನು ಸ್ವಗೃಹದಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ’’ ಎಂದು ಪಿಎಂಎಲ್-ಎನ್ ಪಕ್ಷದ ವಕ್ತಾರ ಮರಿಯಾಮ್ ಔರಂಗಜೇಬ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಈಗಾಗಲೇ ಕೊರೋನ ಸೋಂಕು ದೃಢಪಟ್ಟಿರುವ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್‌ಗೆ ಕೋವಿಡ್-19 ದೃಢಪಟ್ಟ ಬಳಿಕ ಅವರು ಸ್ವಯಂ ಕ್ವಾರಂಟೈನ್‌ಗೊಳಗಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಈವರೆಗೆ ಪಾಕಿಸ್ತಾನದಲ್ಲಿ ಕೊರೋನ ಪ್ರಕರಣಗಳು ದೃಢಪಟ್ಟವರ ಒಟ್ಟು ಸಂಖ್ಯೆ 1,03,671ಕ್ಕೇರಿದೆ. ಒಟ್ಟು 2067 ಮಂದಿ ಮೃತಪಟ್ಟಿದ್ದು, 34,355 ಮಂದಿ ಚೇತರಿಸಿಕೊಂಡಿದ್ದಾರೆ.
ಪಂಜಾಬ್ ಪ್ರಾಂತದಲ್ಲಿ 38,903 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಪಾಕಿಸ್ತಾನದ ಉಳಿದ ಪ್ರಾಂತಗಳಿಗಿಂತ ಅತ್ಯಧಿಕವಾಗಿದೆ.
Next Story





