Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸದ್ಯವೇ...

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸದ್ಯವೇ ‘ವೈರಲ್ ಡಯೋಗ್ನಸ್ಟಿಕ್ ಲ್ಯಾಬ್’

ಸುಮಾರು 1.40ಕೋಟಿ ರೂ. ವೆಚ್ಚ: ಜೂನ್ ತಿಂಗಳ ಅಂತ್ಯಕ್ಕೆ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ9 Jun 2020 8:32 PM IST
share
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸದ್ಯವೇ ‘ವೈರಲ್ ಡಯೋಗ್ನಸ್ಟಿಕ್ ಲ್ಯಾಬ್’

ಉಡುಪಿ, ಜೂ.9: ಕೊರೋನ ಮಹಾ ಸ್ಪೋಟದಿಂದ ರಾಜ್ಯದಲ್ಲೇ ನಂಬರ್ ಸ್ಥಾನಕ್ಕೆ ಏರಿರುವ ಉಡುಪಿ ಜಿಲ್ಲೆಯಲ್ಲಿ ಸುಮಾರು 1.40ಕೋಟಿ ರೂ. ವೆಚ್ಚ ದಲ್ಲಿ ಸರ್ವ ಸುಸಜ್ಜಿತವಾದ ಸರಕಾರಿ ‘ವೈರಲ್ ಡಯೋಗ್ನಸ್ಟಿಕ್ ಲ್ಯಾಬ್’ ಸ್ಥಾಪನೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಮುಂದೆ ಕೊರೋನ ಪರೀಕ್ಷೆಯನ್ನು ವೇಗದಗತಿಯಲ್ಲಿ ನಡೆಸಲು ಅನುಕೂಲವಾಗಲಿರುವ ಈ ಲ್ಯಾಬ್, ಜೂನ್ ತಿಂಗಳ ಅಂತ್ಯಕ್ಕೆ ಉದ್ಘಾಟನೆಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಜಿಲ್ಲಾಸ್ಪತ್ರೆಯಲ್ಲಿ ಗುರುತಿಸಲಾಗಿರುವ ಸುಮಾರು 1700 ಚದರ ಅಡಿ ವಿಸ್ತ್ರೀರ್ಣದ ಕೊಠಡಿಯಲ್ಲಿ ಈ ಲ್ಯಾಬ್‌ನ ಸಿವಿಲ್ ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರದವರು ನಡೆಸುತಿದ್ದಾರೆ. ಸುಮಾರು 40ಲಕ್ಷ ರೂ. ವೆಚ್ಚದ ಈ ಕಾಮಗಾರಿ ಇಂದು ಪೂರ್ಣಗೊಳ್ಳಲಿದೆ. ಈ ಪ್ರಯೋಗಾಲಯದಲ್ಲಿ ಒಟ್ಟು 12 ಕೊಠಡಿಗಳಿದ್ದು, ಇಲ್ಲಿನ ನೆಲ ಮತ್ತು ಮೇಲ್ಛಾವಣಿಗೆ ಅತ್ಯಾಧುನಿಕ ವಾದ ಮೆಟಿರಿಯಲ್‌ಗಳನ್ನು ಹಾಕಲಾಗಿದೆ.

ವಿದೇಶಿ ಯಂತ್ರೋಪಕರಣಗಳು: ಕೋವಿಡ್ ಪರೀಕ್ಷೆಗೆ ಬೇಕಾದ ಯಂತ್ರಗಳನ್ನು ಈಗಾಗಲೇ ಬೆಂಗಳೂರಿನ ಏಜೆನ್ಸಿ ಕಂಪೆನಿಯಲ್ಲಿ ಆರ್ಡರ್ ಮಾಡಲಾಗಿದೆ. ಕಂಪೆನಿಯ ಮೂಲಕ ಈ ಯಂತ್ರಗಳನ್ನು ಅಮೆರಿಕಾ ಮತ್ತು ಜರ್ಮನಿಯಿಂದ ತರಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಅಲ್ಲಿಂದ ಬಂದಿರುವ ಈ ಯಂತ್ರ ಗಳು ಚೆನ್ನೈಯ ಸ್ಟೋರ್ ಹೌಸ್‌ನಲ್ಲಿದ್ದು, ಎರಡು ದಿನಗಳಲ್ಲಿ ಉಡುಪಿಗೆ ಬರಲಿವೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಆರ್‌ಟಿ ಪಿಸಿಆರ್, ಆರ್‌ಎನ್‌ಎ ಎಕ್ಸಾಕ್ಟರ್ ಹೀಗೆ ಕೆಲವು ಯಂತ್ರಗಳು ಅಮೆರಿಕಾದಿಂದ ಮತ್ತು ಮೈನಸ್ 80, 20 ರೆಫ್ರಿಜರೇಟರ್, ಬಯೋಸೆಪ್ಟಿ ಕ್ಯಾಬಿನೆಟ್, ಅಟೋಕ್ಲೈವ್ ಸೇರಿದಂತೆ ಇನ್ನು ಕೆಲವು ಯಂತ್ರಗಳನ್ನು ಜರ್ಮನಿ ಯಿಂದ ತರಿಸಿಕೊಳ್ಳಲಾಗುತ್ತಿದೆ. ಈ ಯಂತ್ರಗಳಿಗೆ ಸುಮಾರು ಒಂದು ಕೆಟಿ ರೂ.ವರೆಗೆ ವೆಚ್ಚವಾಗುತ್ತದೆ.

ಇತ್ತೀಚೆಗೆ ಆರ್ಡರ್ ಮಾಡಿರುವ ಕಾರಣ ಮತ್ತು ಕಂಪೆನಿಯಲ್ಲಿ ಯಂತ್ರಗಳ ಸ್ಟಾಕ್ ಇಲ್ಲದ ಹಿನ್ನೆಲೆಯಲ್ಲಿ ಇವುಗಳು ಉಡುಪಿ ಬರಲು ವಿಳಂಬವಾಗಿದೆ ಎಂಬುದು ಅಧಿಕಾರಿಗಳ ಸಬೂಬು. ಮುಂದೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಪ್ರಮಾಣಪತ್ರ ನೀಡಿದ ಬಳಿಕ ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ.

ಸಿಬ್ಬಂದಿಗಳಿಗೆ ತರಬೇತಿ:  ಈ ಲ್ಯಾಬ್‌ಗೆ ಅಗತ್ಯ ಇರುವ ನಾಲ್ಕು ಸಿಬ್ಬಂದಿಗಳಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ ತರಬೇತಿ ನೀಡಲಾಗಿದ್ದು, ಇನ್ನು ಇಬ್ಬರನ್ನು ತರಬೇತಿಗಾಗಿ ಕಳುಹಿಸಲಾಗಿದೆ. ಮುಂದೆ ಬೆಂಗಳೂರಿನ ನಿಮ್ಹಾನ್ ಆಸ್ಪತ್ರೆಯಲ್ಲಿ ಇವರಿಗೆಲ್ಲ ಒಂದು ದಿನದ ತರಬೇತಿ ನೀಡಲಾಗುತ್ತದೆ.

ಈಗಾಗಲೇ ಜಿಲ್ಲಾಸ್ಪತ್ರೆಯ ಇಬ್ಬರು ಖಾಯಂ ಸಿಬ್ಬಂದಿ ವೆನ್ಲಾಕ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಅದೇ ರೀತಿ ಒಬ್ಬರು ಎನ್‌ಎಚ್‌ಎಂ ಸಿಬ್ಬಂದಿ ಮತ್ತು ಮೂವರು ಹೊರಗುತ್ತಿಗೆಯ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡ ಲಾಗಿದೆ. ಮುಂದೆ ಎರಡನೇ ಹಂತದಲ್ಲಿ ಇನ್ನೊಂದು ತಂಡವನ್ನು ತರಬೇತಿಗೆ ಕಳುಹಿಸಿಕೊಡಲಾಗುವುದು.

ಈ ಲ್ಯಾಬ್‌ನಲ್ಲಿ ಒಂದು ಪಾಳಿಯಲ್ಲಿ ಒಬ್ಬರು ಮೈಕ್ರೋ ಬಯೋಲಜಿಸ್ಟ್, ನಾಲ್ಕು ಲ್ಯಾಬ್ ಟೆಕ್ಟಿನಿಶಿಯನ್, ಒಬ್ಬರು ಡೇಟ್ ಎಂಟ್ರಿ ಆಪರೇಟರ್, ಒಬ್ಬರು ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟು ಏಳು ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮುಂದೆ ಅಗತ್ಯಕ್ಕೆ ತಕ್ಕಂತೆ ಪಾಳಿಯನ್ನು ಹೆಚ್ಚಿಸಿ ಇಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಎಲ್ಲ ಕಾಯಿಲೆಗಳ ಪರೀಕ್ಷೆಗೆ ಅನುಕೂಲ

ಕೋವಿಡ್-19 ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾದ ಈ ಲ್ಯಾಬ್‌ನಲ್ಲಿ ಮುಂದೆ ಕೆಎಫ್‌ಡಿ (ಮಂಗನಕಾಯಿಲೆ), ಡೆಂಗ್ಯೂ, ಎಚ್1 ಎನ್1ನಂತಹ ವೈರಲ್ ಕಾಯಿಲೆಯ ಪರೀಕ್ಷೆ ಕೂಡ ಮಾಡಬಹುದಾಗಿದೆ. ಪ್ರಸ್ತುತ ಸರಕಾರಿ ಆಸ್ಪತ್ರೆಯ ರೋಗಿಗಳ ಈ ಎಲ್ಲ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.

ಕೋವಿಡ್-19 ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಸರಕಾರ 2250ರೂ. ದರವನ್ನು ನಿಗದಿಪಡಿಸಿದೆ. ಮುಂದೆ ಜಿಲ್ಲಾಸ್ಪತ್ರೆಯ ಸರ್ವ ಸುಸಜ್ಜಿತ ಲ್ಯಾಬ್‌ನಿಂದ ಸರಕಾರಕ್ಕೆ ಬಹಳಷ್ಟು ಪ್ರಯೋಜನ ಆಗಲಿದೆ. ಈ ಲ್ಯಾಬ್ ನಿರ್ಮಾಣಕ್ಕೆ ಬೇಕಾದ ಹಣವನ್ನು ಜಿಲ್ಲಾಡಳಿ ಎಸ್‌ಡಿಆರ್ ನಿಧಿ ನಿಂದ ಒದಗಿಸುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X