ಡ್ರೈವಿಂಗ್ ಲೈಸೆನ್ಸ್ , ಮೋಟಾರ್ ವಾಹನಗಳ ದಾಖಲೆಗಳ ವಾಯಿದೆ ದಿನಾಂಕ ವಿಸ್ತರಣೆ

ಹೊಸದಿಲ್ಲಿ: ಮೋಟಾರ್ ವಾಹನಗಳ ಸಂಬಂಧಿಸಿ ದಾಖಲೆಗಳ ವಾಯಿದೆ ಕೊನೆಯ ದಿನಾಂಕವನ್ನು ಕೇಂದ್ರ ಸರಕಾರ ಮತ್ತೆ ಮುಂದೂಡಿದೆ. ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಅಥವಾ ಫಿಟ್ನೆಸ್ ಸರ್ಟಿಫಿಕೇಟ್ ಗಳ ವಾಯಿದೆ ದಿನಾಂಕವನ್ನು ಸೆಪ್ಟಂಬರ್ 30ರವರೆಗೆ ಮುಂದೂಡಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ದಾಖಲೆಗಳ ನವೀಕರಣ ಮತ್ತು ದಿನಾಂಕ ವಿಸ್ತರಣೆ ಕಷ್ಟಸಾಧ್ಯವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
Next Story





