ಜಮೀಯತೆ ಅಹ್ಲೆ ಹದೀಸ್ ಮಸೀದಿಗಳು ಪುನಾರಂಭ
ಉಡುಪಿ, ಜೂ.9: ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆಯ ಅಧೀನದಲ್ಲಿರುವ ಜಿಲ್ಲೆಯ ಮಸೀದಿಗಳಲ್ಲಿ ಐದು ಹೊತ್ತಿನ ನಮಾಝ್ ಹಾಗೂ ಜುಮಾ ನಮಾಝನ್ನು ಜೂ.8ರಿಂದ ಆರಂಭಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿಯ ಷರತ್ತುಗಳನ್ನು ಪಾಲಿಸಲಾಗುತ್ತಿದೆ. ಸಾರ್ವಜನಿಕರು ಕೂಡಾ ಇಲಾಖೆಯಿಂದ ಬಂದ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಹೇಳಿಕೆಯಲ್ಲಿ ಮನವಿ ಮಾಡಿದೆ.
Next Story





