2021ರಲ್ಲಿ ಒಲಿಂಪಿಕ್ಸ್ ನಡೆಯದಿದ್ದರೆ ರಿಯೋ ನನ್ನ ಕೊನೆಯ ಒಲಿಂಪಿಕ್ಸ್ : ಪೇಸ್

ಹೊಸದಿಲ್ಲಿ, ಜೂ.9: ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2021ಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅನ್ನು ರದ್ದುಗೊಳಿಸಿದರೆ ಮತ್ತೊಂದು ಒಲಿಂಪಿಕ್ಸ್‌ಗಾಗಿ ಕಾಯುವುದಿಲ್ಲ. ತಾನು ಈ ಹಿಂದೆ ಆಡಿರುವುದು ವೃತ್ತಿ ಬದುಕಿನ ಕೊನೆಯ ಒಲಿಂಪಿಕ್ಸ್ ಆಗಿರುತ್ತದೆ ಎಂದು ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೇಳಿದ್ದಾರೆ. ವೃತ್ತಿಪರ ಟೆನಿಸ್‌ನಲ್ಲಿ 2020 ತನ್ನ ಕೊನೆಯ ವರ್ಷವಾಗಲಿದೆ ಎಂದು 2019ರ ಕೊನೆಯಲ್ಲಿ ಪೇಸ್ ಘೋಷಿಸಿದ್ದರು. ಇದು ತನ್ನ ‘ಕೊನೆಯ ಘರ್ಜನೆ’ ಎಂದು ಬಣ್ಣಿಸಿದರು. ಆದಾಗ್ಯೂ, ಕೋವಿಡ್ -19 ಕಾರಣದಿಂದಾಗಿ ಅವರ ಭವ್ಯ ವಿದಾಯದ ಯೋಜನೆಗಳ ಮೇಲೆ ನೀರನ್ನು ಚೆಲ್ಲಿದರು.
ಟೋಕಿಯೊ ಒಲಿಂಪಿಕ್ಸ್ ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿತ್ತು. ಆದರೆ ಕೊರೋನ ವೈರಸ್ ಕಾರಣ ಅದನ್ನು ಮುಂದಿನ ವರ್ಷ ಅದೇ ಸಮಯಕ್ಕೆ ಮುಂದೂಡಲಾಗಿದೆ. ಹೇಗಾದರೂ ಲಸಿಕೆ ಇನ್ನೂ ದೂರದ ಕಲ್ಪನೆಯಾಗಿರುವುದರಿಂದ 2021ರಲ್ಲಿ ಒಲಿಂಪಿಕ್ಸ್ ನಡೆಯುವ ಸಾಧ್ಯತೆ ಇದೆಯೋ ಎಂದು ನನಗೆ ಗೊತ್ತಿಲ್ಲ. ಟೋಕಿಯೊ ಒಲಿಂಪಿಕ್ಸ್ ರದ್ದುಗೊಂಡರೆ ನಾನು ಈಗಾಗಲೇ ರಿಯೋ ಡಿ ಜಿನೈರೊದಲ್ಲಿ ನನ್ನ ಕೊನೆಯ ಒಲಿಂಪಿಕ್ಸ್ ಆಡಿದ್ದೇನೆ. ಮುಂದಿನ ಒಲಿಂಪಿಕ್ಸ್‌ಗಾಗಿ ನಾನು ಕಾಯಲು ಹೋಗುವುದಿಲ್ಲ’’ ಎಂದು ಪೇಸ್ ರವಿವಾರ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಪೂರವ್ ರಾಜಾ ಅವರಿಗೆ ತಿಳಿಸಿದರು.
1991ರಲ್ಲಿ ವೃತ್ತಿಪರ ಟೆನಿಸ್ ಪ್ರವೇಶದ ಬಳಿಕ ಪೇಸ್ 29 ವರ್ಷ ಗಳನ್ನು ಪೂರೈಸಿದ್ದಾರೆ ಮತ್ತು ಒಳ್ಳೆಯ ಮತ್ತು ಕೆಟ್ಟ ಎರಡೂ ಅನುಭವಗಳನ್ನು ಪಡೆದಿದ್ದಾರೆ. 2001ರಲ್ಲಿ ಚೀನಾದಲ್ಲಿ ನಡೆದ ಪಂದ್ಯಾವಳಿಯೊಂದರಲ್ಲಿ ತಮಗೆ ಆಗಿರುವ ಕೆಟ್ಟ ಅನುಭವವನ್ನು ಹಂಚಿಕೊಂಡರು.
‘‘ನಾವು 2001 ರಲ್ಲಿ ಚೀನಾದ ಲ್ಯಾಂಗ್ ಫಾಂಗ್ ಎಂಬ ನಗರದಲ್ಲಿ ಆಡಿದ್ದೆವು ಎಂದು ನನಗೆ ನೆನಪಿದೆ. ಅದು ಫೆಬ್ರವರಿ ಮಧ್ಯಭಾಗ ಮತ್ತು ಹೊರಗೆ ಹಿಮಪಾತವಾಗುತ್ತಿತ್ತು. ನಾವು ಒಳಾಂಗಣ ಕೋರ್ಟ್‌ನಲ್ಲಿ ಆಡುತ್ತಿದ್ದರೂ, ಮುರಿದು ಹೋಗಿರುವ ಕಾರಣ ನೀಡಿ ಹೀಟರ್‌ನ್ನು ಆಫ್ ಮಾಡಿದ್ದರು. ನಮಗೆ ಸರಿಯಾದ ಆಹಾರವನ್ನು ಸಹ ನೀಡಲಾಗಿಲ್ಲ. ನಾನು ಫ್ರೈಡ್‌ರೈಸ್ ಕೇಳಿದ್ದಕ್ಕೆ ಸ್ವಲ್ಪ ಹಾವಿನ ಮಾಂಸವನ್ನು ನೀಡಲಾಗಿತ್ತು. ಇದು ಖಂಡಿತವಾಗಿಯೂ ನನಗೆ ದುಃಸ್ವಪ್ನವಾಗಿದೆ’’ ಎಂದು ವಿವರಿಸಿದರು.
ಪೇಸ್ ತಮ್ಮ ಇಬ್ಬರು ಡಬಲ್ಸ್ ಪಾಲುದಾರರ ಬಗ್ಗೆ ಮಾತ ನಾಡಿದರು. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್ ಜೊತೆ ಯಶಸ್ಸು ಗಳಿಸಿರುವುದನ್ನು ಪೇಸ್ ಸ್ಮರಿಸಿದರು. ಭೂಪತಿಯ ಬೆಂಬಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಹನ್ ಬೋಪಣ್ಣ ಸರ್ವ್ ಬಗ್ಗೆ ಗುಣಗಾನ ಮಾಡಿದರು.
‘‘ಹಿಂಗಿಸ್ ಮತ್ತು ನವ್ರಾಟಿಲೋವಾ ನಡುವಿನ ವ್ಯತ್ಯಾಸವನ್ನು ಮತ್ತು ಅವರು ಇಬ್ಬರೊಂದಿಗೆ ಹೇಗೆ ಹೊಂದಿಕೊಂಡರು ಎಂಬುದನ್ನು ವಿವರಿಸಿದರು. ಹಿಂಗಿಸ್ ನನ್ನ ಶೈಲಿಯನ್ನು ಅಭಿನಂದಿಸಿದ್ದಾರೆ ಮತ್ತು ನಾನು ಅವರೊಂದಿಗೆ ನನ್ನ ನೈಜ ಆಟವನ್ನು ಆಡಬಲ್ಲೆ. ಅವರು ನನಗೆ ನಾಯಕ ಾಗಲು ಅವಕಾಶ ಮಾಡಿಕೊಟ್ಟರು. ಮತ್ತೊಂದೆಡೆ, ನವ್ರಾಟಿಲೋವಾ ನನ್ನನ್ನು ಮುನ್ನ ಡೆಸಿದರು ಮತ್ತು ಯಾವಾಗಲೂ ನನಗೆ ಮಾರ್ಗದರ್ಶನ ನೀಡಿದರು. ಅವರು ನಮ್ಮ ತಂಡದ ನಾಯಕಿ’’ ಎಂದರು.
ತನ್ನ ವಿದಾಯವನ್ನು ಹೇಗೆ ಬಿಡ್ ಮಾಡಲು ಬಯಸುವಿರಿ ಎಂದು ಕೇಳಿದಾಗ ‘‘ನಾನು ಏನನ್ನಾದರೂ ಮಾಡಿರುವುದನ್ನು ತಿಳಿದು ಕೊಳ್ಳಲು ಬಯ ಸುತ್ತೇನೆ ಎಂದು ಪೇಸ್‌ಹೇಳಿದರು.







