Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ನವಜಾತ ಶಿಶುವಿನ ಚಿಕಿತ್ಸೆಗಾಗಿ...

ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಗಳ ಮೆಟ್ಟಿಲೇರಿದ ಫುಟ್ಬಾಲ್ ಆಟಗಾರ!

ವಾರ್ತಾಭಾರತಿವಾರ್ತಾಭಾರತಿ9 Jun 2020 11:27 PM IST
share
ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಗಳ ಮೆಟ್ಟಿಲೇರಿದ ಫುಟ್ಬಾಲ್ ಆಟಗಾರ!

ಕೋಲ್ಕತಾ, ಜೂ.9: ಮಹಾನಗರದ ಹೆಚ್ಚಿನ ಆಸ್ಪತ್ರೆಗಳು ಕೋವಿಡ್-19 ರೋಗಿಗಳ ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದು, ಕೋಲ್ಕತಾ ಮೂಲದ ಲೈಬೀರಿಯಾ ಫುಟ್ಬಾಲ್ ಪಟು ಅಂಶುಮನ್ ಕ್ರೋಮಾ ಹಾಗೂ ಅವರ ಪತ್ನಿ ಅನಾರೋಗ್ಯ ಪೀಡಿತ ನವಜಾತ ಶಿಶುವಿಗೆ ಚಿಕಿತ್ಸೆ ಕೊಡಿಸಲು ಹಲವು ಆಸ್ಪತ್ರೆಗಳ ಮೆಟ್ಟಿಲೇರಿರುವ ಘಟನೆ ನಡೆದಿದೆ.

ಒಂದು ವಾರದ ಹೆಣ್ಣು ಮಗು ಬಿಂದೂ ಇದೀಗ ಚೇತರಿಸಿಕೊಂಡಿದ್ದು, ಪಾರ್ಕ್ ಸ್ಟ್ರೀಟ್ ಆಸ್ಪತ್ರೆಯ ನಿಗಾದಲ್ಲಿದೆ ಎಂದು ಕ್ರೋಮಾ ಅವರ ಪತ್ನಿ ಪೂಜಾ ಹೇಳಿದ್ದಾರೆ.

ಕಳೆದ ವರ್ಷ ಪಿಯರ್‌ಲೆಸ್ ಎಸ್‌ಸಿ ತಂಡ ಐತಿಹಾಸಿಕ ಕೋಲ್ಕತಾ ಫುಟ್ಬಾಲ್ ಲೀಗ್ ಪ್ರೀಮಿಯರ್ ಡಿವಿಜನ್ ಪ್ರಶಸ್ತಿ ಜಯಿಸಲು ತಂಡದ ನಾಯಕತ್ವ ವಹಿಸಿದ್ದ ಕ್ರೋಮಾ ಬುಧವಾರ ಹೆಣ್ಣುಮಗುವಿನ ತಂದೆಯಾಗಿದ್ದರು. ಕ್ರೋಮಾ ಅವರ ನವಜಾತ ಶಿಶುವಿಗೆ ಶನಿವಾರ ಜಾಂಡೀಸ್‌ನ ಲಕ್ಷಣ ಕಾಣಿಸಿಕೊಂಡಿತ್ತು. ಹೆರಿಗೆ ಮಾಡಿಸಿದ್ದ ಶ್ಯಾಮ್ ಬಝಾರ್ ನರ್ಸಿಂಗ್ ಹೋಮ್‌ಗೆೆ ಮೊದಲಿಗೆ ಮಗುವನ್ನು ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲ ಎಂಬ ಕಾರಣ ನೀಡಿ ಮಗುವನ್ನು ದಾಖಲಿಸಿಕೊಳ್ಳಲು ನರ್ಸಿಂಗ್ ಹೋಮ್‌ನವರು ನಿರಾಕರಿಸಿದರು.

ಆ ಬಳಿಕ ಎರಡು ಮಲ್ಟಿ-ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿದ ಕ್ರೋಮಾ-ಪೂಜಾ ದಂಪತಿ ಕೊನೆಗೂ ಪೊಲೀಸರ ಮಧ್ಯಪ್ರವೇಶದಿಂದ ರವಿವಾರ ರಾತ್ರಿ ವಿಭಿನ್ನ ವ್ಯವಸ್ಥೆಯಿರುವ ಆಸ್ಪತ್ರೆಗೆ ಮಗುವನ್ನು ದಾಖಲಿಸಿದರು.

''ನಾನು ಸಂಪೂರ್ಣ ಹತಾಶನಾಗಿದ್ದೇನೆ. ಬಿಂದೂ ನಮ್ಮ ಮೊದಲ ಮಗು ಹಾಗೂ ಮಧ್ಯರಾತ್ರಿಯಲ್ಲಿ ನಮಗಾಗಿರುವ ಅನುಭವ ದುಸ್ವಪ್ನದಂತಿತ್ತು. ನಾನು ಮಧ್ಯರಾತ್ರಿ ವೇಳೆ ಅನಾರೋಗ್ಯಕ್ಕೀಡಾದ ಮಗುವನ್ನು ಎತ್ತಿಕೊಂಡು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡಿದ್ದೆ. ಆದರೆ ಯಾರೂ ಕೂಡ ನಮ್ಮ ಸಹಾಯಕ್ಕೆ ಬರಲಿಲ್ಲ. ನಮ್ಮಲ್ಲಿ ಕೋವಿಡ್-19 ರೋಗಿಗಳಿಗೆ ಮಾತ್ರ ವಿಭಾಗವಿದೆ ಎಂದು ಒಂದು ಆಸ್ಪತ್ರೆಯವರು ಹೇಳಿದ್ದರು. ಇನ್ನೊಬ್ಬರು ಬೆಡ್‌ಗಳೇ ಇಲ್ಲ ಎಂದು ಹೇಳಿದ್ದರು''ಎಂದು ತನಗಾದ ನೋವನ್ನು ಕ್ರೋಮಾ ಹೇಳಿದ್ದಾರೆ.

 ''ಕೊರೋನ ವೈರಸ್‌ನಿಂದಾಗಿ ನಮಗೆಲ್ಲರಿಗೂ ತುಂಬಾ ಕಷ್ಟವಾಗಿದೆ. ನನ್ನ ಮಗುವನ್ನು ಕರೆದುಕೊಂಡು ಮೂರು ಆಸ್ಪತ್ರೆಗಳಿಗೆ ಹೋಗಿದ್ದೆ. ಒಂದು ಆಸ್ಪತ್ರೆಯವರು ಮೂರು ಗಂಟೆ ಕುಳ್ಳಿರಿಸಿ, ಬಳಿಕ ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಸರಕಾರ ಈ ಸಮಸ್ಯೆಯತ್ತ ಗಮನಹರಿಸಲೇಬೇಕಾಗಿದೆ. ಇತರ ಕಾಯಿಲೆಯಿರುವ ರೋಗಿಗಳಿಗೆ ಇದರಿಂದ ತುಂಬಾ ಕಷ್ಟವಾಗುತ್ತದೆ. ಇದೀಗ ನನ್ನ ಮಗಳು ಚೇತರಿಸಿಕೊಂಡಿದ್ದಕ್ಕೆ ಸಂತೋಷವಾಗಿದೆ''ಎಂದು ಕ್ರೋಮಾ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಕ್ರೋಮಾ ಅವರ ಪುತ್ರಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಮಗುವಿಗೆ ರಕ್ತ ವರ್ಗಾವಣೆಯ ತುರ್ತು ಅಗತ್ಯವಿತ್ತು. ಆದರೆ ಮಗುವಿನ ರಕ್ತದ ಗುಂಪು ಅಪರೂಪದ 'ಎಬಿ 'ಪಾಸಿಟಿವ್ ಆಗಿತ್ತು.

''ವೈದ್ಯರು ಈಗ ರಕ್ತ ವರ್ಗಾವಣೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಒಂದೆರಡು ದಿನಗಳ ಕಾಲ ನಿಗಾದಲ್ಲಿಡಲು ವೈದ್ಯರು ಬಯಸಿದ್ದಾರೆ. ಬಳಿಕ ಅವರು ನಿರ್ಧರಿಸುತ್ತಾರೆ. ಮಗುವಿಗೆ ಈಗ ಲಘು ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮಗುವಿನ ಆರೋಗ್ಯ ಸ್ವಲ್ಪ ಸುಧಾರಿಸಿದೆ''ಎಂದು ಕ್ರೋಮಾ ಅವರ ಪತ್ನಿ ಪೂಜಾ ಹೇಳಿದ್ದಾರೆ.

  ಕ್ರೋಮಾ ಅವರು ಪಿಯರ್‌ಲೆಸ್ ಕ್ಲಬ್ ಐತಿಹಾಸಿಕ ಸಿಎಫ್‌ಎಲ್ ಪ್ರಶಸ್ತಿ ಜಯಿಸಲು ನಾಯಕತ್ವವಹಿಸಿದ್ದರು. 1958ರ ಬಳಿಕ ಮೊದಲ ಬಾರಿ ಮೋಹನ್ ಬಗಾನ್, ಈಸ್ಟ್ ಬಂಗಾಳ ಹಾಗೂ ಮೊಹಮ್ಮದನ್ ಸ್ಪೋರ್ಟಿಂಗ್ ಹೊರತುಪಡಿಸಿದ ತಂಡವೊಂದು ಈ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಳ್ಳಲು ಸಮರ್ಥವಾಗಿತ್ತು. ಕ್ರೋಮಾ 13 ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಈ ಸಾಹಸಕ್ಕೆ ಕ್ರೋಮಾ ಕಳೆದ ಋತುವಿನಲ್ಲಿ ಐಲೀಗ್‌ನಲ್ಲಿ ಈಸ್ಟ್ ಬಂಗಾಳ ತಂಡದಲ್ಲಿ ಸ್ಥಾನ ಪಡೆದಿದ್ದರು.

​

share
ವಾರ್ತಾಭಾರತಿ
ವಾರ್ತಾಭಾರತಿ
Next Story
X