ಅಸ್ಸಾಂ ತೈಲ ಬಾವಿ ಬಳಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯ ಮೃತದೇಹ ಪತ್ತೆ

ಗುವಾಹಟಿ,ಜೂ.10: ಅಸ್ಸಾಂನ ತೈಲ ಬಾವಿಯಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದ ವೇಳೆ ನಾಪತ್ತೆಯಾಗಿದ್ದ ಆಲ್ ಇಂಡಿಯಾ ಲಿಮಿಟೆಡ್‌ನ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೃತದೇಹ ಘಟನಾ ಸ್ಥಳ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಸ್ಸಾಂನ ಟಿನುಸುಕಿಯಾ ಜಿಲ್ಲೆಯಲ್ಲಿ 14 ದಿನಗಳಿಂದ ಅನಿಲ ಸೋರಿಕೆಯಾಗುತಿದ್ದ ತೈಲಬಾವಿಯಲ್ಲಿ ಮಂಗಳವಾರ ದಿಢೀರನೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ ಅದನ್ನು 10 ಕಿ.ಮೀ.ದೂರದಿಂದಲೂ ನೋಡಬಹುದಾಗಿತ್ತು.
Next Story





