ಉಳ್ಳಾಲದ ನಿಮ್ರ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಆರಂಭ
ಮಂಗಳೂರು, ಜೂ.10: ಉಳ್ಳಾಲದ ಮುಕ್ಕಚೇರಿಯ ಬಿರ್ಲಾ ಕಂಪೌಂಡ್ ನಲ್ಲಿರುವ "ನಿಮ್ರ ಮಸೀದಿಯಲ್ಲಿ" ಜೂನ್ 9 ರಿಂದ ಸಾಮೂಹಿಕ ನಮಾಝ್ ಆರಂಭಗೊಂಡಿದೆ. ಜೂ.12ರ ಶುಕ್ರವಾರ ಖತೀಬ್ ರಫೀಉದ್ದೀನ್ ಕುದ್ರೋಳಿ ಯವರ ನೇತೃತ್ವದಲ್ಲಿ ಜುಮಾ ಖುತ್ಬಾ ನಡೆಯಲಿದೆ.
ಅಝಾನ್ ಗೆ ಐದು ನಿಮಿಷ ಮೊದಲು ಮಸೀದಿಯ ಬಾಗಿಲು ತೆರೆಯಲಾಗುವುದು ಮತ್ತು ನಮಾಝ್ ಆದ ತಕ್ಷಣ ಮಸೀದಿಯನ್ನು ಮುಚ್ಚಲಾಗು ವುದು. ಸುನ್ನತ್ ನಮಾಝ್ ಮನೆಯಲ್ಲಿ ನಿರ್ವಹಿಸಬೇಕು. ನಮಾಝ್'ಗೆ ಮಾರ್ಕ್ ಹಾಕಲಾಗಿರುವ ಸ್ಥಳದಲ್ಲಿ 2 ಅಡಿ ಅಂತರದಲ್ಲಿ ನಿಲ್ಲಬೇಕು. ಮನೆಗಳಲ್ಲಿ ವುಝೂ ಮಾಡಿ ಬರಬೇಕು. ಮಸೀದಿಯ ಟಾಯ್ಲೆಟ್ ಹಾಗೂ ವಾಶ್ರೂಮನ್ನು ಬಳಸಬಾರದು .
ಹ್ಯಾಂಡ್ ಸ್ಯಾನಿಟೈಸರನ್ನು ಬಳಸಬೇಕು. ಮಾಸ್ಕ್ ಹಾಕಿ ಮಸೀದಿಗೆ ಬರಬೇಕು ಮತ್ತು ಮಸೀದಿಯಿಂದ ಹೋಗುವ ತನಕ ಮಾಸ್ಕನ್ನು ತೆಗೆಯಬಾರದು. ಹಸ್ತಲಾಗವ ಮಾಡಬಾರದು, ಆಲಂಗಿಸಬಾರದು. 10 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷದ ಮೇಲಿನ ಹಿರಿಯರು ಮಸೀದಿಗೆ ಬರುವ ಬದಲು ಮನೆಗಳಲ್ಲಿ ನಮಾಝ್ ನಿರ್ವಹಿಸಬೇಕು
ಮಸೀದಿಗೆ ಬರುವಾಗ ಮುಸಲ್ಲಾಗಳನ್ನು ಅಥವಾ ನಮಾಝ್ ಗಾಗಿ ಹಾಸುವ ಯಾವದೇ ಬಟ್ಟೆಯನ್ನು ತರಬೇಕು ಮತ್ತು ನಮಾಝ್ ನಿರ್ವಹಿಸಿದ ಬಳಿಕ ಅದನ್ನು ಕೊಂಡು ಹೋಗಬೇಕು. ಅಝಾನ್ ಆಗಿ 5 ನಿಮಿಷಗಳಲ್ಲಿ ನಮಾಝ್ ನಿರ್ವಹಿಸಲಾಗುವುದು ಮತ್ತು ಜುಮಾದ ಅವದಿಯನ್ನು ಕಡಿತಗೊಳಿಸಲಾಗುವುದು. ಜ್ಬರ, ಶೀತ ಗಂಟಲು ನೋವು ಕೆಮ್ಮು ಮುಂತಾದ ರೋಗಗಳಿರುವವರು ಮಸೀದಿಗೆ ಬರಬಾರದು.
ವಿದೇಶಗಳಿಂದ ಹಾಗು ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್ ಮುಗಿಸಿದ ಪ್ರಮಾಣಪತ್ರ ತೋರಿಸದೆ ಮಸೀದಿ ಪ್ರವೇಶಿಸಬಾರದು
ಮಸೀದಿಯೊಳಗೆ ಅಥವಾ ಮಸೀದಿಯ ಅಂಗಳದಲ್ಲಿ ಗುಂಪುಗೂಡಿ ನಿಲ್ಲಬಾರದು ನಮಾಝ್ ಆದ ತಕ್ಷಣ ಅವರವರ ಮನೆಗೆ ತರಳಬೇಕು ಎಂದು ಮಸೀದಿಯ ಅಧ್ಯಕ್ಷ ಬಿ.ಎಂ.ಬದ್ರುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







