ದಾವಣಗೆರೆ: ಠಾಣೆಯಲ್ಲಿಯೇ ಜೂಜಾಡಿದ ಆರೋಪ; ಐವರು ಕಾನ್‍ಸ್ಟೇಬಲ್‍ಗಳ ಬಂಧನ

ದಾವಣಗೆರೆ, ಜೂ.10: ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂಜಾಡಿದ ಆರೋಪ ಪ್ರಕರಣ ಸಂಬಂಧ ಐವರು ಕಾನ್‍ಸ್ಟೇಬಲ್‍ಗಳನ್ನು ಬಂಧಿಸಲಾಗಿದೆ.
ಕಾನ್‍ಸ್ಟೇಬಲ್‍ಗಳಾದ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್ ಮತ್ತು ಬಾಲರಾಜ್ ಎಂಬುವರು ಬಂಧಿತ ಆರೋಪಿಗಳೆಂದು ತಿಳಿದುಬಂದಿದ್ದು, ಈ ಸಂಬಂಧ ಐವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, 29 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಠಾಣೆಯ ವಿಶ್ರಾಂತಿ ಕೊಠಡಿಯಲ್ಲಿಯೇ ಜೂಜಾಟವಾಡುತ್ತಿದ್ದು, ಈ ಸಂಬಂಧ ಪೂರ್ವ ವಲಯದ ಐಜಿಪಿ ಅವರಿಗೆ ಮಾಹಿತಿ ಹೋಗಿತ್ತು. ಖಚಿತ ಮಾಹಿತಿ ಮೇರೆಗೆ ಐಜಿ ನಿರ್ದೇಶನದಂತೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story





