ಮೆಟ್ರೋ ಮುಹಮ್ಮದ್ ಹಾಜಿ ನಿಧನ: ಗಣ್ಯರ ಸಂತಾಪ
ಮಂಗಳೂರು : ಇಂದು ನಿಧನರಾದ ಸುನ್ನಿ ಯುವ ಜನ ಸಂಘ ಕೇಂದ್ರೀಯ ಘಟಕದ ಉಪಾಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಕೇಂದ್ರೀಯ ಕೋಶಾಧಿಕಾರಿ ಹಾಗೂ ಕೇರಳದ ಧಾರ್ಮಿಕ, ಸಾಮಾಜಿಕ, ಸಾಂಘಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿತ್ತಾರಿಯ ಮೆಟ್ರೋ ಮುಹಮ್ಮದ್ ಹಾಜಿ ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಕರ್ನಾಟಕ ಎಸ್.ವೈ.ಎಸ್.ಮತ್ತು 'ಸಮಸ್ತ' ಅಧೀನದ ವಿವಿಧ ಸಂಘಟನೆಗಳ ಪ್ರಮುಖರಾದ ಎಸ್.ಬಿ.ದಾರಿಮಿ, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಕೆ.ಆರ್ ಹುಸೈನ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ, ಕೆ.ಎಂ.ಎ. ಕೊಡುಂಗಾಯಿ, ಅನೀಸ್ ಕೌಸರಿ, ಮೌಲನಾ ಅಬ್ದುರ್ರಝಾಕ್ ಹಾಜಿ ಮಲೇಶಿಯ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ರಿಯಾಝುದ್ದೀನ್ ಹಾಜಿ ಮಂಗಳೂರು, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಪುತ್ತೂರು , ರಫೀಕ್ ಹಾಜಿ ನೇರಳಕಟ್ಟೆ, ಕೆ.ಬಿ.ದಾರಿಮಿ, ರೆಂಜಾಡಿ ದಾರಿಮಿ, ಇಸ್ಮಾಯಿಲ್ ಯಮಾನಿ , ಅಬ್ದುಲ್ ರಹಿಮಾನ್ ಅಝಾದ್ ಹಾಗೂ ಎಸ್.ವೈ.ಎಸ್.ದ.ಕ.ಜಿಲ್ಲಾ ಸಮಿತಿ ನಾಯಕರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.





