ವಾಯುಯಾನ ಉದ್ಯಮಕ್ಕೆ ಈ ವರ್ಷ 6.34 ಲಕ್ಷ ಕೋಟಿ ರೂ. ನಷ್ಟ

ಸಾಂದರ್ಭಿಕ ಚಿತ್ರ
ಲಂಡನ್, ಜೂ. 10: ಕೊರೋನ ವೈರಸ್ನಿಂದಾಗಿ ವಾಯುಯಾನ ಸಂಸ್ಥೆಗಳ ಆದಾಯವು ಅರ್ಧಕ್ಕೆ ಇಳಿದಿದ್ದು, ಉದ್ಯಮವು ಈ ವರ್ಷ 84 ಬಿಲಿಯ ಡಾಲರ್ (ಸುಮಾರು 6.34 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ಕಳೆದುಕೊಳ್ಳಲಿದೆ ಎಂದು ಅಂತರ್ರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಶನ್ (ಐಎಟಿಎ) ಮಂಗಳವಾರ ತಿಳಿಸಿದೆ.
ಜಗತ್ತಿನ ಹೆಚ್ಚಿನ ಏರ್ಲೈನರ್ಗಳು ಈಗ ನೆಲದಲ್ಲೇ ಇವೆ. 2021ರಲ್ಲೂ ಏರ್ಲೈನ್ಗಳು ಆರ್ಥಿಕ ಸಂಕಷ್ಟದಲ್ಲೇ ಮುಂದುವರಿಯಲಿವೆ ಹಾಗೂ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಲಿವೆ ಎಂದು ಐಎಟಿಎ ಮಹಾನಿರ್ದೇಶಕ ಅಲೆಕ್ಸಾಂಡರ್ ಡಿ ಜುನಿಯಾಕ್ ಹೇಳಿದ್ದಾರೆ.
Next Story





