‘ರೇಸಿಸಮ್’ ಪದದ ವ್ಯಾಖ್ಯೆಯನ್ನು ಬದಲಿಸಲಿರುವ ಮೆರಿಯಮ್ ವೆಬ್‌ಸ್ಟರ್

ನ್ಯೂಯಾರ್ಕ್, ಜೂ. 10: ಯುವ ಕರಿಯ ಮಹಿಳೆಯೊಬ್ಬರ ಸಲಹೆಯಂತೆ, ಅಮೆರಿಕದ ಡಿಕ್ಶನರಿ ಮೆರಿಯಮ್ ವೆಬ್‌ಸ್ಟರ್ ರೇಸಿಸಮ್ (ಜನಾಂಗೀಯ ತಾರತಮ್ಯ) ಪದಕ್ಕೆ ತಾನು ನೀಡಿರುವ ವ್ಯಾಖ್ಯೆಯನ್ನು ಬದಲಿಸಲಿದೆ.
ಈ ಪದವು ಬಿಳಿಯರಲ್ಲದವರು ಒಳಗಾಗುವ ಶೋಷಣೆಯನ್ನು ಸಮರ್ಥವಾಗಿ ಬಿಂಬಿಸಬೇಕು ಎಂಬುದಾಗಿ ಅಯೋವದ ಡ್ರೇಕ್ ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ ಪದವಿ ಪಡೆದಿರುವ ಕೆನಡಿ ಮಿಶಮ್ ಬಯಸಿದ್ದರು.
ಮೆರಿಯಮ್ ವೆಬ್‌ಸ್ಟರ್ 1847ರಿಂದ ಡಿಕ್ಶನರಿಗಳನ್ನು ಪ್ರಕಟಿಸುತ್ತಿದೆ.
ಜನರ ಒಂದು ಗುಂಪಿನ ಮೇಲೆ ವ್ಯವಸ್ಥಿತ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಈ ಪದದ ವ್ಯಾಖ್ಯೆಗೆ ಸೇರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನಾನು ಅವರಿಗೆ ಹೇಳಿದೆ ಎಂದು ಕೆಎಮ್‌ಒವಿ ಸುದ್ದಿ ಚಾನೆಲ್‌ನೊಂದಿಗೆ ಮಾತನಾಡುತ್ತಾ ಮಿಶಮ್ ಹೇಳಿದರು.
ಮಿಶಮ್ ಮಾಡಿರುವ ಮನವಿಯ ಆಧಾರದಲ್ಲಿ ಪದದ ವ್ಯಾಖ್ಯೆಯನ್ನು ಬದಲಾಯಿಸಲಾಗುವುದು ಎಂದು ಮೆರಿಯಮ್ ವೆಬ್‌ಸ್ಟರ್‌ನ ಸಂಪಾದಕೀಯ ವ್ಯವಸ್ಥಾಪಕ ಪೀಟರ್ ಸೊಕೊಲೊವ್‌ಸ್ಕಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಖಚಿತಪಡಿಸಿದರು.
Next Story





