ನಾಯರ್‌ಕೆರೆ : ಜು.1ಕ್ಕೆ ತೆರೆಯಲಿದೆ ಹಾಶಿಮಿ ಮಸೀದಿ
ಉಡುಪಿ, ಜೂ. 10: ಉಡುಪಿಯಲ್ಲಿ ಕೋವಿಡ್-19ರ ಸದ್ಯದ ಸ್ಥಿತಿಯನ್ನು ಅವಲೋಕಿಸಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಈ ದಿಸೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪರಿಶೀಲಿಸಿದ ನಂತರ ಉಡುಪಿ ಬ್ರಹ್ಮಗಿರಿಯ ನಾಯರ್‌ಕೆರೆ ಯಲ್ಲಿರುವ ಹಾಶಿಮಿ ಮಸೀದಿಯ ಜಮಾಅತ್ ಸಮಿತಿ ಜು.1ರಿಂದ ಮಸೀದಿಯನ್ನು ಸಾರ್ವಜನಿಕರಿಗೆ ತೆರೆದಿಡಲು ನಿರ್ಧರಿಸಿದೆ.
ಸಮಿತಿ ಇಂದು ನಡೆಸಿದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕೊರೋನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನೀಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಜಾರಿಗೆ ತಂದ ನಂತರ ಜುಲೈ 1ರಿಂದ ಮಸೀದಿ ತೆರೆಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಜಮಾಅತ್ ಅಧ್ಯಕ್ಷ ಜಕ್ರಿಯಾ ಅಸ್ಸಾದಿ ಮತ್ತು ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಸಂಯೋಜಕ ಎಂ.ಇಕ್ಬಾಲ್ ಮನ್ನಾ ತಿಳಿಸಿದ್ದಾರೆ.
Next Story





