Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು: ಅತಿವೃಷ್ಟಿ, ಲಾಕ್‍ಡೌನ್‍...

ಚಿಕ್ಕಮಗಳೂರು: ಅತಿವೃಷ್ಟಿ, ಲಾಕ್‍ಡೌನ್‍ ನಿಂದ ಸಂಕಷ್ಟದಲ್ಲಿ ಕಾಫಿ ಉದ್ಯಮ

ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ: ಕೆಜೆಎಫ್ ಎಚ್ಚರಿಕೆ

ವಾರ್ತಾಭಾರತಿವಾರ್ತಾಭಾರತಿ10 Jun 2020 11:22 PM IST
share
ಚಿಕ್ಕಮಗಳೂರು: ಅತಿವೃಷ್ಟಿ, ಲಾಕ್‍ಡೌನ್‍ ನಿಂದ ಸಂಕಷ್ಟದಲ್ಲಿ ಕಾಫಿ ಉದ್ಯಮ

ಚಿಕ್ಕಮಗಳೂರು, ಜೂ.10: ಅತಿವೃಷ್ಟಿ ಹಾಗೂ ಲಾಕ್‍ಡೌನ್‍ನಿಂದಾಗಿ ಕಾಫಿ ಉಧ್ಯಮವು ಹಲವು ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೇ ಆಶ್ರಯಿಸಿರುವ ಬೆಳೆಗಾರರ ಮತ್ತು ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಕಾಫಿ ಉದ್ಯಮ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಂದ್ರ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಸರಕಾರ ಬಿಡಿಗಾಸಿನ ನೆರವನ್ನೂ ನೀಡಿಲ್ಲ. ಲಾಕ್‍ಡೌನ್ ಸಂದರ್ಭ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋ ರೂ. ಪ್ಯಾಕೇಜ್‍ನಲ್ಲೂ ಕಾಫಿ ಬೆಳೆಗಾರರಿಗೆ ನಯಾಪೈಸೆಯ ನೆರವು ಸಿಕ್ಕಿಲ್ಲ. ಮುಂದಿನ 20 ದಿನಗಳೊಳಗೆ ಸರಕಾರ ಕಾಫಿ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ 150 ವರ್ಷಗಳಲ್ಲೇ ಅತೀ ಹೆಚ್ಚು ಅತೀವೃಷ್ಟಿ ಸಂಭವಿಸಿದೆ. ಪ್ರವಾಹ ಮತ್ತು ಭೂ ಕುಸಿತಗಳು ಉಂಟಾಗಿ ಕಾಫಿ ಬೆಳೆಯಲ್ಲಿ ಶೇ.35-70ರಷ್ಟು ಬೆಳೆನಷ್ಟ ಸಂಭವಿಸಿದೆ. ಕೇಂದ್ರ ಸರಕಾರದ ವಾಣಿಜ್ಯ ನೀತಿಗಳ ಫಲವಾಗಿ ಕಳೆದ 26 ವರ್ಷಗಳ ಹಿಂದೆ ಕಾಫಿಗೆ ಸಿಗುತ್ತಿದ್ದ ಬೆಲೆ ಈಗ ಸಿಗುವಂತಾಗಿದೆ. ಪರಿಣಾಮ ಕಾಫಿ ತೋಟಗಳ ನಿರ್ವಹಣಾ ವೆಚ್ಚ ಗಗನಕ್ಕೇರುವಂತಾಗಿದ್ದು, ಬೆಳೆಗಾರರಿಗೆ ಅಸಲೂ ಸಿಗುತ್ತಿಲ್ಲ ಎಂದ ಅವರು, ಕಳೆದ 5 ವರ್ಷಗಳ ಕಾಫಿ ಬೆಲೆಯನ್ನು ಗಣನೆಗೆ ತೆಗೆದುಕೊಂಡರೆ ಅರೇಬಿಕಾ ಕಾಫಿಗೆ ಸರಾಸರಿ ಶೇ.38ರಷ್ಟು ಹಾಗೂ ರೋಬೋಸ್ಟಾ ಕಾಫಿಗೆ ಸರಾಸರಿ ಶೇ.8ರಷ್ಟು ಬೆಲೆ ನಷ್ಟವಾಗಿದೆ. ಇದರಿಂದಾಗಿ ಕಾಫಿ ಬೆಳೆಗಾರರ ಬದುಕು ದುಸ್ತರವಾಗುತ್ತಿದೆ ಎಂದು ಹೇಳಿದರು. 

ಸದ್ಯ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನ ಮಹಾಮಾರಿಯು ಕಾಫಿ ಉಧ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ರೋಗ ನಿಯಂತ್ರಣಕ್ಕಾಗಿ ಸರಕಾರ ಜಾರಿ ಮಾಡಿದ ಲಾಕ್‍ಡೌನ್‍ನಿಂದ ಕಾಫಿ ಉಧ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಲಾಕ್‍ಡೌನ್‍ನಿಂದಾಗಿ ವಲಸೆ ಕಾರ್ಮಿಕರು ತಮ್ಮ ಸ್ವಸ್ಥಳಗಳಿಗೆ ಮರಳುತ್ತಿದ್ದಾರೆ. ಕಾರ್ಮಿಕರು ತಮ್ಮ ಊರುಗಳಿಗೆ ಮರಳಿರುವುದರಿಂದ ಕಾಫಿ ತೋಟಗಳಲ್ಲಿನ ಕೆಲಸಗಳು ನೆನೆಗುದಿಗೆ ಬಿದ್ದಿವೆ. ರಸಗೊಬ್ಬರಗಳು, ಶಿಲೀಂದ್ರ ಮತ್ತು ಕೀಟನಾಶಕಗಳು ಲಭ್ಯವಿದ್ದರೂ ಸಹಾ ಲಾಕ್‍ಡೌನ್‍ನಿಂದ ರೈತರಿಗೆ ವಿತರಣೆಯಾಗಿಲ್ಲ. ಕಾರ್ಖಾನೆಗಳು ಬಂದ್ ಆಗಿದ್ದರಿಂದ ಗೊಬ್ಬರ ಮತ್ತು ಕೀಟನಾಶಕಗಳನ್ನು ತಯಾರಿಸಲು ಕಚ್ಚಾವಸ್ತು ದೊರೆಯದೇ ಇರುವುದರಿಂದ ಬೆಳೆಗಾರರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಕೀಟನಾಶಕ ಪೂರೈಕೆಯಾಗಿಲ್ಲ. ಕಾಫಿ ಮತ್ತು ಕಾಳುಮೆಣಸಿಗೆ ನೀರಾವರಿಗಾಗಿ ಇಂಧನ ಚಾಲಿತ ಪಂಪ್‍ಸೆಟ್‍ಗಳನ್ನು ಬಳಸಲು ಡೀಸೆಲ್ ಪೂರೈಕೆಯೂ ವಿಳಂಬವಾಗಿದ್ದು, ಯಂತ್ರೋಪಕರಣಗಳ ರಿಪೇರಿಗೆ ನುರಿತ ಕಾರ್ಮಿಕರು ದೊರೆಯದೇ ಕಾಫಿ ತೋಟಗಳ ಸಮರ್ಪಕ ತೋಟ ನಿರ್ವಹಣೆ ಸಾಧ್ಯವಾಗದೇ ಕಾಫಿ ತೋಟ, ಎಸ್ಟೇಟ್‍ ಗಳನ್ನು ಪಾಳು ಬೀಳುವಂತಾಗಿದೆ ಎಂದವರು ಅಳಲು ತೋಡಿಕೊಂಡರು.

2019-20ನೇ ಸಾಲಿನಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಘಿ ಕಾಫಿ ಉತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡಿದ್ದು, ಕೊರೋನ ರೋಗದ ಪರಿಣಾಮವಾಗಿ ಕಾಫಿ ವ್ಯಾಪಾರಿಗಳು ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು, ಕಾಫಿ ಕ್ಯೂರಿಂಗ್ ವರ್ಕ್ಸ್ ಗಳನ್ನು ಮುಚ್ಚಲಾಗಿತ್ತು. ಕಾಫಿ ಸಾಗಣೆಗೂ ನಿರ್ಬಂಧ ಹೇರಲಾಗಿತ್ತು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬೆಳೆಗಾರರು ಜೀವನ ನಿರ್ವಹಣೆಗಾಗಿ ಈ ಹಿಂದಿನಿಂದಲೂ ತಮ್ಮ ತೋಟಗಳಲ್ಲಿನ ಮರಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಕೋವಿಡ್-19ನಿಂದ ಮರಗಳನ್ನು ಸಾಗಿಸಲೂ ಸರಕಾರ ನಿರ್ಬಂಧವಿದೆ. ಇದರಿಂದ ಬೆಳೆಗಾರರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಹಣದ ವಹಿವಾಟು ಸ್ಥಗಿತಗೊಂಡಿದ್ದರ ಪರಿಣಾಮವಾಗಿ ತೋಟ ನಿರ್ವಹಣೆಗೆ ಬೇಕಾದ ಸಲಕರಣೆಗಳನ್ನು ಪಡೆಯಲು, ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲು, ಲಭ್ಯವಿರುವ ಕಾರ್ಮಿಕರನ್ನು ಬಳಕೆಮಾಡಿಕೊಳ್ಳಲು ಸಾಧ್ಯವಾಗದೇ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮತೋಲನತೆ ಉಂಟಾಗಿದೆ ಎಂದು ತೀರ್ಥ ಮಲ್ಲೇಶ್ ತಿಳಿಸಿದರು.

ಕಾಫಿ ಉದ್ಯಮದ ಈ ಸಮಸ್ಯೆಗಳಿಂದಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲೂ ಸಾಧ್ಯವಾಗಿಲ್ಲ. ಸಾಲ ಮರುಪಾವತಿಸದ ಬೆಳಗಾರರಿಗೆ ಬ್ಯಾಂಕ್‍ಗಳು ಮರುಸಾಲವನ್ನು ನೀಡಲು ಹಿಂದೇಟು ಹಾಕುತ್ತಿವೆ. ಅಲ್ಲದೇ ಬ್ಯಾಂಕ್‍ಗಳು ಸಾಲ ಮರುಪವಾತಿಗಾಗಿ ಬೆಳೆಗಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬೆಳೆಗಾರರು ಇಂತಹ ತೀವ್ರತರನಾದ ಸಂಕಷ್ಟದಲ್ಲಿದ್ದರೂ ಕಾಫಿಮಂಡಳಿ ಬೆಳೆಗಾರರ ನೆರವಿಗೆ ಬಾರದೇ ನಿಷ್ಕ್ರಿಯವಾಗಿದೆ. ಇನ್ನೂ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಸಂಸದರು, ಜನಪ್ರತಿನಿಧಿಗಳು ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವಿರಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಕಾಫಿಮಂಡಳಿ ಶೀಘ್ರ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತೀ ಗ್ರಾಪಂ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಕೆಜಿಎಫ್ ಚಿಂತನೆ ನಡೆಸಿದೆ. ಕಾಫಿ ಮಂಡಳಿ ಎದುರು ಸರಣಿ ಧರಣಿಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ತೀರ್ಥ ಮಲ್ಲೇಶ್ ತಿಳಿಸಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಜಗನ್ನಾಥ್, ಮಾಜಿ ಜಿಲ್ಲಾಧ್ಯಕ್ಷ ಡಾ.ಎನ್.ಕೆ.ಪ್ರದೀಪ್‍ ಗೌಡ, ಜಿಲ್ಲಾ ಉಪಾಧ್ಯಕ್ಷ ವಿಜಯ್, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಮುರುಳೀದರ್ ಬಕ್ಕರವಳ್ಳಿ, ಸದಸ್ಯರಾದ ಡಿ.ಎಸ್.ರಘು, ಲಿಂಗಪ್ಪಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಕೇಂದ್ರ ಸರಕಾರ ಲಾಕ್‍ಡೌನ್ ಸಂತ್ರಸ್ಥರಿಗೆ ನೆರವಾಗಲು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರನ್ನು ಪರಿಗಣಿಸಿಲ್ಲ. ಕೇಂದ್ರಕ್ಕೆ ಹಲವಾರು ಮನವಿ ಪತ್ರಗಳನ್ನು ಹಾಗೂ ಒಕ್ಕೂಟವು ವಾಣಿಜ್ಯ ಸಚಿವಾಲಯ, ವಿತ್ತಸಚಿವರು, ಸಂಸದರು, ಶಾಸಕರನ್ನು ಭೇಟಿಮಾಡಿ, ಸಮಸ್ಯೆ ವಿವರಿಸಿದ್ದರೂ ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಕೇಂದ್ರದ ವಾಣಿಜ್ಯ ಸಚಿವಾಲಯ ಮೂಖ ಪ್ರೆಕ್ಷಕನಂತೆ ವರ್ತಿಸುತ್ತಿದ್ದು, ಕೇಂದ್ರ ನೆರವು ನೀಡದಿದ್ದಲ್ಲಿ ಕಾಫಿ ತೋಟಗಳಲ್ಲಿ ಕೆಲಸಗಳನ್ನು ನಿಲ್ಲಿಸಬೇಕಾಗುತ್ತದೆ, ಇದರಿಂದ ಸಾಮಾಜಿಕ ಅರಾಜಕತೆ ಹಸಿವು ದಂಗೆ ಏಳುವ ಎಲ್ಲಾ ಸಾದ್ಯತೆಗಳಿವೆ.

- ಮುರುಳೀಧರ್ ಬಕ್ಕರವಳ್ಳಿ, ಪ್ರಧಾನ ಕಾರ್ಯದರ್ಶಿ ಕೆಜಿಎಫ್

ಬೇಡಿಕೆಗಳು: ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರ ಬೆಳೆ ಸಾಲ 8 ಸಾವಿರ ಕೋ. ರೂ. ಇದ್ದು, ಬೆಳೆಸಾಲ ಪಡೆದ ಎಲ್ಲಾ ಕಾಫಿ ಬೆಳೆಗಾರರ ಅಸಲು ಮತ್ತು ಬಡ್ಡಿಯನ್ನು 2010, ಎ.4ಕ್ಕೆ ಪರಿಗಣಿಸಿ ಎನ್.ಪಿ.ಎ. ಮತ್ತು ಡಿ.ಆರ್.ಟಿ ಆದ ಸಾಲಗಳನ್ನೂ ಒಳಗೊಂಡಂತೆ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕಾಫಿ ಬೆಳೆಗಾರರ ಅಲ್ಪಾವಧಿ ಸಾಲಗಳನ್ನು ದೀರ್ಘಾವಧಿ ಸಾಲಗಳನ್ನಾಗಿ ಪುನರ್ ರಚಿಸಿ ಶೇ.3ರ ಬಡ್ಡಿದರದಲ್ಲಿ ಸಾಲವನ್ನು ಮರುಪಾವತಿ ಮಾಡಲು 10 ವರ್ಷಗಳ ಕಾಲಾವಧಿ ನೀಡಬೇಕು. ಶೇ 3% ಬಡ್ಡಿದರದಲ್ಲಿ ಹೊಸ ಸಾಲ ಸೌಲಭ್ಯವನ್ನು ಬೆಳೆಗಾರರಿಗೆ ನೀಡಬೇಕು. ಕಾಫಿ ತೋಟಗಳಲ್ಲಿ ಮರುನಾಟಿ, ನೀರಾವರಿ ವ್ಯವಸ್ಥೆ, ಮತ್ತು ಮೂಲ ಸೌಕರ್ಯಗಳ ಅಭಿವೃದ್ದಿಗೆ ಸಹಾಯಧನ ಹೆಚ್ಚಿಸಬೇಕು. ಪ್ಲಾಂಟೇಷನ್ ಕೆಲಸಗಳನ್ನು ಎಂ.ಎನ್.ಆರ್.ಇ.ಜಿ ಯೋಜನೆಗಳಿಗೆ ಎಲ್ಲಾ ಕಾಫಿ ಬೆಳೆಗಾರರನ್ನು ಸೇರಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X