Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಮ್ಮ ಅಂಗಾಂಗಗಳಲ್ಲಿಯ ಶಬ್ದಗಳು ಗಂಭೀರ...

ನಮ್ಮ ಅಂಗಾಂಗಗಳಲ್ಲಿಯ ಶಬ್ದಗಳು ಗಂಭೀರ ಕಾಯಿಲೆಗಳನ್ನು ಸೂಚಿಸುತ್ತಿರಬಹುದು

ವಾರ್ತಾಭಾರತಿವಾರ್ತಾಭಾರತಿ11 Jun 2020 12:13 AM IST
share

ನಮ್ಮ ಶರೀರವನ್ನು ವಿವಿಧ ಭಾಗಗಳನ್ನು ಒಳಗೊಂಡಿರುವ ಯಂತ್ರಕ್ಕೆ ಹೋಲಿಸಬಹುದು. ಯಂತ್ರದ ಭಾಗಗಳಲ್ಲಿ ದೋಷಗಳು ಉಂಟಾದಾಗ ಅವು ಶಬ್ದವನ್ನು ಹೊರಡಿಸುವಂತೆ ನಮ್ಮ ಶರೀರವೂ ಇಂತಹ ಸಂಕೇತಗಳನ್ನು ನೀಡುತ್ತಿರುತ್ತದೆ. ನಮ್ಮ ಶರೀರದಿಂದ ಹಲವಾರು ವಿಧಗಳ ಶಬ್ದಗಳು ಹೊರಡುತ್ತಿರುತ್ತವೆ,ಈ ಪೈಕಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ ಮತ್ತು ಕೆಲವು ಶಬ್ದಗಳು ನಮಗೆ ಕೇಳುವುದೇ ಇಲ್ಲ. ಈ ಪೈಕಿ ಕೆಲವು ಶಬ್ದಗಳು ಅಂಗಗಳ ಕಾರ್ಯನಿರ್ವಹಣೆಯಿಂದಾಗಿ ಸಹಜವಾಗಿರುತ್ತವೆ. ಆದರೆ ಕೆಲವು ಶಬ್ದಗಳು ನಮ್ಮ ಅನಾರೋಗ್ಯವನ್ನು ಸೂಚಿಸಬಹುದು. ಸಮಸ್ಯೆಯು ತೀವ್ರಗೊಳ್ಳದಂತೆ ಸರಿಯಾದ ಸಮಯದಲ್ಲಿ ಇಂತಹ ಶಬ್ದಗಳನ್ನು ಗುರುತಿಸಿ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ. ಇಂತಹ ಐದು ಶಬ್ದಸಂಕೇತಗಳ ಕುರಿತು ಮಾಹಿತಿಯಿಲ್ಲಿದೆ.......

* ಉಸಿರಾಟದ ಶಬ್ದಗಳು

  ಉಸಿರಾಟವು ನಮ್ಮ ಶರೀರದ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಹಲವೊಮ್ಮೆ ಉಸಿರಾಡುವಾಗ ಮೂಗಿನಿಂದ ಗೊರಕೆ ಅಥವಾ ಶಿಳ್ಳೆಯಂತಹ ಶಬ್ದ ಕೇಳಿಬರುತ್ತಿರುತ್ತದೆ. ಇಂತಹ ಶಬ್ದವು ಉಸಿರಾಟದ ಮಾರ್ಗದಲ್ಲಿ ಲೋಳೆಯು ತುಂಬಿಕೊಂಡಿದೆ ಅಥವಾ ಊತವುಂಟಾಗಿದೆ ಮತ್ತು ಇದರಿಂದಾಗಿ ಗಾಳಿಯು ಸರಾಗವಾಗಿ ಚಲಿಸುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಲೋಳೆ ಅಥವಾ ಸಿಂಬಳ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ನಮ್ಮ ಶರೀರವನ್ನು ಪ್ರವೇಶಿಸುವುದನ್ನು ತಡೆಯುವುದರಿಂದ ಅದು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿದೆ. ಆದರೆ ಲೋಳೆಯು ಅತಿಯಾಗಿ ತುಂಬಿಕೊಂಡಾಗ ಸೂಕ್ತವಾಗಿ ಉಸಿರಾಡಲು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಬಿಸಿನೀರಿನ ಹಬೆಯನ್ನು ಉಸಿರಾಡಿಸಬೇಕು. ಸ್ಥಿತಿಯಲ್ಲಿ ಸುಧಾರಣೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

* ಕೆಮ್ಮಿನೊಂದಿಗೆ ಶಿಳ್ಳೆ ಅಥವಾ ಬೊಗಳಿದಂತಹ ಶಬ್ದ

ಕೆಮ್ಮು ನಿರಂತರವಾಗಿದ್ದರೆ ಮತ್ತು ಅದರ ಜೊತೆಗೆ ಶಿಳ್ಳೆ ಅಥವಾ ಬೊಗಳಿದಂತಹ ಶಬ್ದ ಕೇಳಿಬರುತ್ತಿದ್ದರೆ ಅದು ಗಂಭೀರ ಉಸಿರಾಟ ಸಮಸ್ಯೆಯನ್ನು ಸೂಚಿಸಬಹುದು. ಇವೆರಡೂ ಶಬ್ದಗಳು ಅಲರ್ಜಿ,ಅಸ್ತಮಾ ಅಥವಾ ರಕ್ತನಾಳ ಕಟ್ಟಿಕೊಂಡು ಹೃದಯ ವೈಫಲ್ಯದ ಸಂಕೇತವಾಗಿರಬಹುದು. ಇಂತಹ ಸಮಸ್ಯೆಯು ಸಾಮಾನ್ಯವಾಗಿ ಶ್ವಾಸಕೋಶಗಳು ಅಥವಾ ಶ್ವಾಸನಾಳಗಳಲ್ಲಿ ಊತವಿದ್ದಾಗ ಕಾಣಿಸಿಕೊಳ್ಳುತ್ತದೆ. ಕೆಮ್ಮು ನಿರಂತರವಾಗಿದ್ದರೆ ಮತ್ತು ಉಸಿರಾಡಲು ತೊಂದರೆಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

* ಗಂಟೆ ಅಥವಾ ಶಿಳ್ಳೆ ಶಬ್ದ

 ಕೆಲವರಿಗೆ ತಮ್ಮ ಕಿವಿಗಳಲ್ಲಿ ಹಲವಾರು ಬಾರಿ ಗಂಟೆಗಳು ಅಥವಾ ಶಿಳ್ಳೆಗಳ ಶಬ್ದಗಳು ಕೇಳಿಬರುತ್ತಿರುತ್ತವೆ. ಇವು ’ಟಿನಿಟಸ್’ ಎಂಬ ನಿರ್ದಿಷ್ಟ ಸಮಸ್ಯೆಯ ಸಂಕೇತವಾಗಿರಬಹುದು. ಇದನ್ನು ಸರಳವಾಗಿ ಕಿವಿಮೊರೆತ ಎಂದು ಹೇಳಬಹುದು. ಸಾಮಾನ್ಯವಾಗಿ ನಾವು ಕೇಳುತ್ತಿರುವ ದೊಡ್ಡ ಶಬ್ದವೊಂದು ದಿಢೀರ್‌ನೆ ನಿಂತಾಗ ಒಂದು ವಿಧದ ಶಬ್ದವನ್ನು ನಾವು ಕೇಳುತ್ತಿರುತ್ತೇವೆ. ಆದರೆ ಆಗಾಗ್ಗೆ ಇಂತಹ ಶಬ್ದ ಕೇಳಿಬರುತ್ತಿದ್ದರೆ ಕಿವಿಯಲ್ಲಿ ಸೋಂಕುಂಟಾಗಿದೆ ಅಥವಾ ಕಿವಿಯಲ್ಲಿರುವ ಕೂದಲ ಕೋಶಗಳು ನಾಶಗೊಳ್ಳಲು ಆರಂಭವಾಗಿವೆ ಎನ್ನುವುದನ್ನು ಸೂಚಿಸುತ್ತದೆ. ಇಂತಹ ಶಬ್ದಗಳು ಕೇಳಿ ಬಂದಾಗ ಅಗತ್ಯವಾಗಿ ವೈದ್ಯರನ್ನು ಭೇಟಿಯಾಗಬೇಕು.

*ಕೀಲುಗಳಲ್ಲಿ ಕಟ ಕಟ ಶಬ್ದ

ನಾವು ನಡೆಯುತ್ತಿರುವಾಗ,ಏಳುತ್ತಿರುವಾಗ ಅಥವಾ ಕುಳಿತುಕೊಳ್ಳುವಾಗ ಹೆಚ್ಚಿನ ಸಲ ನಮ್ಮ ಕೀಲುಮೂಳೆಗಳು ಬಳಕೆಯಾಗುತ್ತವೆ. ಸಾಮಾನ್ಯವಾಗಿ ಕೀಲುಗಳ ನಡುವಿನ ದ್ರವದಲ್ಲಿ ಗಾಳಿಯ ಗುಳ್ಳೆಗಳು ಉಂಟಾದಾಗ ಕಟ ಕಟ ಎಂಬ ಶಬ್ದ ಕೇಳಿಬರುತ್ತದೆ. ಆದರೆ ಆಗಾಗ್ಗೆ ಇಂತಹ ಶಬ್ದ ಕೇಳಿ ಬರುತ್ತಿದ್ದರೆ ಅಥವಾ ನಡೆಯುವಾಗ, ಏಳುವಾಗ ಮತ್ತು ಕುಳಿತುಕೊಳ್ಳುವಾಗ ಮೂಳೆಗಳು ಪರಸ್ಪರ ಉಜ್ಜಿದ ಅನುಭವವಾಗುತ್ತಿದ್ದರೆ ಅದು ಕೀಲುಗಳಲ್ಲಿ ದ್ರವದ ಪ್ರಮಾಣ ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸಬಹುದು. ಹೆಚ್ಚಾಗಿ ವಯಸ್ಸಾದವರಲ್ಲಿ ಈ ಸಮಸ್ಯೆಗಳು ಕಂಡುಬರುತ್ತವೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ,ಇಲ್ಲದಿದ್ದರೆ ಮೂಳೆಗಳು ಪರಸ್ಪರ ಉಜ್ಜಿಕೊಳ್ಳುವ ಮೂಲಕ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

*ಹೊಟ್ಟೆಯಲ್ಲಿ ಶಬ್ದ

 ಇದೊಂದು ಸಾಮಾನ್ಯ ಲಕ್ಷಣವಾಗಿದ್ದು,ಜೀರ್ಣಾಂಗದಲ್ಲಿ ಏನೋ ಸಮಸ್ಯೆಯಿದೆ ಎನ್ನುವುದನ್ನು ಸೂಚಿಸುತ್ತದೆ. ಜಠರದಲ್ಲಿ ದ್ರವಗಳ ಸೂಕ್ತ ಪಚನದ ಕೊರತೆಯಿಂದಾಗಿ ಇಂತಹ ಶಬ್ದಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಇಂತಹ ಶಬ್ದಗಳು ಕೇಳಿಬಂದ ಬಳಿಕ ಅತಿಸಾರ ಅಥವಾ ಬೇಧಿಯೂ ಉಂಟಾಗಬಹುದು. ಹೀಗಾದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳಬೇಕು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X