ದೇಶದಲ್ಲಿ ಸತತ ಐದನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಹೊಸದಿಲ್ಲಿ, ಜೂ.11: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಗುರುವಾರ ಪ್ರತಿ ಲೀಟರ್ಗೆ ತಲಾ 60 ಪೈಸೆ ಹೆಚ್ಚಿಸಲಾಗಿದೆ. ತೈಲ ಪಿಎಸ್ಯುಗಳು ದರ ಪರಿಷ್ಕರಣೆಯಲ್ಲಿ 82 ದಿನಗಳ ವಿರಾಮ ಕೊನೆಗೊಳಿಸಿದ ಬಳಿಕ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 73.40ರೂ.ನಿಂದ 74ರೂ.ಗೆ ಹಾಗೂ ಡೀಸೆಲ್ ದರ ಲೀಟರ್ಗೆ 71.62 ರೂ. ನಿಂದ 72.22 ರೂ.ಗೆ ಹೆಚ್ಚಿಸಲಾಗಿದೆ ಎಂದು ಸರಕಾರಿ ತೈಲ ಮಾರುಕಟ್ಟೆ ಕಂಪೆನಿಗಳು ದರ ಅಧಿಸೂಚನೆಯಲ್ಲಿ ತಿಳಿಸಿದೆ.
ದೇಶಾದ್ಯಂತ ದರ ಹೆಚ್ಚಿಸಲಾಗಿದ್ದು, ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಪ್ರಮಾಣವನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್-ಡೀಸೆಲ್ ದರಗಳಲ್ಲಿ ವ್ಯತ್ಯಾಸವಾಗುತ್ತದೆ.
ಇದೀಗ ಸತತ ಐದನೆ ದಿನ ತೈಲ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ. ಸತತ ಐದು ದಿನಗಳ ತನಕ ಹಂತ ಹಂತವಾಗಿ ದರ ಏರಿಕೆಯಿಂದಾಗಿ ಪೆಟ್ರೋಲ್ಗೆ ಲೀಟರ್ಗೆ 2.74 ರೂ. ಹಾಗೂ ಡೀಸೆಲ್ಗೆ 2.83 ರೂ.ಹೆಚ್ಚಳವಾದಂತಾಗಿದೆ.
Next Story