ಎನ್‍ಐಆರ್ ಎಫ್ ರ‍್ಯಾಂಕಿಂಗ್ 2020: ಮೊದಲನೇ ಸ್ಥಾನ ಉಳಿಸಿಕೊಂಡ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್
ಜೆಎನ್ ಯುಗೆ ಎರಡನೇ ಸ್ಥಾನ
ಹೊಸದಿಲ್ಲಿ : ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯನ್ನು ಪಡೆದು ಎನ್‍ಐಆರ್‍ಎಫ್ (ನ್ಯಾಷನಲ್ ಇಂಡಿಯನ್ ರ್ಯಾಂಕಿಂಗ್ ಫ್ರೇಮ್‍ವರ್ಕ್) ರ್ಯಾಂಕಿಂಗ್ 2020ರಲ್ಲಿ ಅಗ್ರ ಸ್ಥಾನ ಪಡೆದಿದೆ. ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದು ವಿವಿ ಪಡೆದಿವೆ. ಎನ್‍ಐಆರ್‍ಎಫ್ ರ್ಯಾಂಕಿಂಗ್‍ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಕಳೆದ ವರ್ಷವೂ ಮೊದಲ ಸ್ಥಾನ ಪಡೆದಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ರ್ಯಾಂಕಿಂಗ್ ನೀಡುತ್ತದೆ.
ಈ ವರ್ಷ ಮ್ಯಾನೇಜ್ಮೆಂಟ್ ಕಾಲೇಜುಗಳ ವಿಭಾಗದಲ್ಲಿ ಐಐಎಂ-ಅಹ್ಮದಾಬಾದ್ ಪ್ರಥಮ ಸ್ಥಾನ ಪಡೆದರೆ, ಐಐಎಂ-ಬೆಂಗಳೂರು ಹಾಗೂ ಐಐಎಂ-ಕೊಲ್ಕತ್ತಾ ನಂತರದ ಎರಡು ಸ್ಥಾನಗಳನ್ನು ಪಡೆದಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ-ಮದ್ರಾಸ್ ಮೊದಲ ಸ್ಥಾನವನ್ನು ಈ ವರ್ಷವೂ ಪಡೆದಿದೆ. ಸಮಗ್ರ ವಿಭಾಗದಲ್ಲಿ ಎಐಐಎಂಎಸ್-ದಿಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.
ಶಿಕ್ಷಣ, ಕಲಿಕೆ, ಸಂಪನ್ಮೂಲಗಳು, ಸಂಶೋಧನೆ, ವೃತ್ತಿಪರ ನೀತಿಗಳು ಮತ್ತಿತರ ಪ್ರಮುಖ ಮಾನದಂಡಗಳ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗುತ್ತದೆ. ಈ ಬಾರಿ ಡೆಂಟಲ್ ಕಾಲೇಜುಗಳನ್ನು ಪ್ರತ್ಯೇಕ ರ್ಯಾಂಕಿಂಗ್ ವಿಭಾಗದಲ್ಲಿ ತರಲಾಗಿದೆ.
ಎನ್‍ಐಆರ್ ಎಫ್ ಪಟ್ಟಿಯ ಟಾಪ್ 25 ವಿವಿಗಳು ಇಂತಿವೆ.
1. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್, ಬೆಂಗಳೂರು
2. ಜವಾಹರಲಾಲ್ ನೆಹರೂ ವಿವಿ
3. ಬನಾರಸ್ ಹಿಂದು ವಿವಿ
4. ಅಮೃತ ವಿಶ್ವ ವಿದ್ಯಾಪೀಠಂ
5. ಜಾದವಪುರ್ ವಿವಿ
6.ಹೈದರಾಬಾದ್ ವಿವಿ
7. ಕೊಲ್ಕತ್ತಾ ವಿವಿ
8. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
9. ಸಾವಿತ್ರಿಬಾಯಿ ಫುಳೆ ಪುಣೆ ವಿವಿ
10. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ
11. ದಿಲ್ಲಿ ವಿವಿ
12. ಅಣ್ಣಾ ವಿವಿ
13. ಭಾರತಿಯಾರ್ ವಿವಿ
14. ಹೋಮಿ ಭಾಭಾ ನ್ಯಾಷನಲ್ ಇನ್‍ಸ್ಟಿಟ್ಯೂಟ್
15. ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಜಿ ಎಂಡ್ ಸಾಯನ್ಸ್
16. ವೆಲ್ಲೋರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
17. ಆಲಿಘರ್ ಮುಸ್ಲಿಂ ವಿವಿ
18. ಇನ್‍ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
19. ಆಂಧ್ರ ವಿವಿ
20. ಶಿಕ್ಷಾ ಒ ಅನುಸಂಧಾನ್
21. ಜಾಮಿಯಾ ಹಮ್ ದರ್ದ್
22 ಮದ್ರಾಸ್ ವಿವಿ
23. ಕೇರಳ ವಿವಿ
24 ಕಳಿಂಗ ಇನ್‍ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ
25. ಶಣ್ಮುಘ ಆಟ್ರ್ಸ್ ಸಾಯನ್ಸ್ ಟೆಕ್ನಾಲಜಿ ಎಂಡ್ ರಿಸರ್ಚ್ ಅಕಾಡೆಮಿ