ಸ್ವಂತ ರಾಜ್ಯಕ್ಕೆ ತೆಳುವ ವಲಸೆ ಕಾರ್ಮಿಕರಿಗೆ ಸೂಚನೆ
ಉಡುಪಿ, ಜೂ.11: ಕೊರೋನ ವೈರಸ್ ಕಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಉಳಿದಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ಈಗಾಗಲೇ ಅವರ ಸ್ವಂತ ಊರುಗಳಿಗೆ ಜಿಲ್ಲಾಡಳಿತದ ವತಿಯಿಂದ ರೈಲು ಹಾಗೂ ಬಸ್ಸುಗಳ ಮೂಲಕ ಈಗಾಗಲೇ ಕಳುಹಿಸಲಾಗಿದೆ.
ಇನ್ನೂ ಕೂಡ ಜಿಲ್ಲೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಅವರ ಸ್ವಂತ ಊರಿಗೆ ಹೋಗಲು ಬಾಕಿಯಾಗಿದ್ದಲ್ಲಿ, ಅಂತಹ ವಲಸೆ ಕಾರ್ಮಿಕರು ಅವರ ಸ್ವಂತ ರಾಜ್ಯಕ್ಕೆ ಹೋಗಲು ಇಚ್ಛಿಸಿದ್ದಲ್ಲಿ ದೂರವಾಣಿ ಸಂಖ್ಯೆ: 0820-2571500ಗೆ ಕರೆ ಮಾಡುವಂತೆ ಅಥವಾ ವ್ಯಾಟ್ಸಪ್ ನಂಬರ್: 98808 31516ಕ್ಕೆ ದಾಖಲೆಗಳನ್ನು ಕಳುಹಿಸಿ ನೊಂದಾವಣೆ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





