ಮನಪಾದ 1,300 ಸಿಬ್ಬಂದಿಗೆ ಆಯುಷ್ ಔಷಧ ವಿತರಣೆ
ಮಂಗಳೂರು, ಜೂ.11: ಆಯುಷ್ ಇಲಾಖೆ ಮತ್ತು ಫಾದರ್ ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉಚಿತ ಆಯುಷ್ ರೋಗನಿರೋಧಕ ಔಷಧಿಗಳನ್ನು ವಿತರಿಸಲಾಯಿತು.
ಪೌರಕಾರ್ಮಿಕರಿಗೆ ಸೇರಿದಂತೆ ಒಟ್ಟು ಸುಮಾರು 1,300 ಜನರಿಗೆ ಆಯುಷ್ ರೋಗನಿರೋಧಕ ಔಷಧಿ ವಿತರಿಸಿ, ಫಾದರ್‌ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಶಿವಪ್ರಸಾದ್ ಔಷಧಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಜಂಟಿ ಆಯುಕ್ತ ಸಂತೋಷ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಶೋಭಾರಾಣಿ ಎನ್.ಎಸ್., ಡಾ.ಯಶ್ವಿತಾ, ಡಾ.ಮುಹಮ್ಮದ್ ನೂರುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
Next Story





