ಟ್ರಂಪ್ ರ‍್ಯಾಲಿಯಲ್ಲಿ ಭಾಗವಹಿಸಿದವರಿಗೆ ಕೊರೋನ ಸೋಂಕು ತಗಲಿದಲ್ಲಿ ಸಂಘಟಕರು ಜವಾಬ್ದಾರರಲ್ಲ !
ಷರತ್ತಿಗೆ ಒಪ್ಪಿದವರಿಗೆ ಮಾತ್ರ ರ‍್ಯಾಲಿಗೆ ಪ್ರವೇಶ

ವಾಷಿಂಗ್ಟನ್: ಒಕ್ಲಹಾಮ ಇಲ್ಲಿನ ತುಲ್ಸ ಎಂಬಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ರ್ಯಾಲಿಯಲ್ಲಿ ಭಾಗವಹಿಸಬೇಕಿದ್ದವರಿಗೆ ಒಂದು ಷರತ್ತು ವಿಧಿಸಲಾಗಿದೆ. ಒಂದು ವೇಳೆ ಅವರಿಗೆ ಮುಂದೆ ಕೊರೋನ ಸೋಂಕು ತಗಲಿದಲ್ಲಿ ಅವರು ಟ್ರಂಪ್ ಅಭಿಯಾನದ ವಿರುದ್ಧ ದಾವೆ ಹೂಡುವುದಿಲ್ಲ ಎಂಬ ಷರತ್ತಿಗೆ ಒಪ್ಪಬೇಕಿದೆ.
ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವವರು ನೋಂದಣಿ ಮಾಡಬೇಕಿದ್ದು ಈ ಸಂದರ್ಭ ಅವರು "ಜನರು ದೊಡ್ಡ ಸಂಖ್ಯೆಯಲಿರುವ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ಸೋಂಕು ಹರಡುವ ಅಪಾಯವಿರುವುದನ್ನು'' ಒಪ್ಪಿಕೊಳ್ಳಬೇಕಿದೆ. ಒಂದು ವೇಳೆ ಭಾಗವಹಿಸಿದವರಿಗೆ ಮುಂದೆ ಸೋಂಕು ತಗಲಿದಲ್ಲಿ ಅವರು ಡೊನಾಲ್ಡ್ ಟ್ರಂಪ್, ರ್ಯಾಲಿ ಆಯೋಜಿಸುವ ಬಿಒಕೆ ಸೆಂಟರ್, ಎಎಸ್‍ಎಂ ಗ್ಲೋಬಲ್ ಸಹಿತ ಅವುಗಳಿಗೆ ಸಂಬಂಧಿಸಿದ ಅಧಿಕಾರಿಗಳು, ಉದ್ಯೋಗಿಗಳು, ಗುತ್ತಿಗೆದಾರರು ಹಾಗೂ ಸ್ವಯಂಸೇವಕರನ್ನು ತಮ್ಮ ಅನಾರೋಗ್ಯ ಅಥವಾ ತಮಗುಂಟಾದ ಹಾನಿಗೆ ಜವಾಬ್ದಾರರನ್ನಾಗಿಸಬಾರದು ಎಂಬುದೇ ಈ ಷರತ್ತಾಗಿದೆ.
ಕೋವಿಡ್-19ನಿಂದ ತೀವ್ರ ಬಾಧಿತವಾದ ದೇಶದಲ್ಲಿ ಟ್ರಂಪ್ ಅವರ ಮೊದಲ ಪ್ರಚಾರ ರ್ಯಾಲಿ ತುಲ್ಸಾದ ಬಿಒಕೆ ಸೆಂಟರ್‍ನಲ್ಲಿ ಜುಲೈ 19ರಂದು ನಡೆಯಲಿದೆ ಎಂದು ಬುಧವಾರ ಘೋಷಿಸಲಾಗಿತ್ತು.





