ಶಾಲಾರಂಭದ ಬಳಿಕ ನರ್ಮ್ ಬಸ್‌ಗಳ ಓಡಾಟ: ಶಾಸಕ ಭಟ್
ಉಡುಪಿ, ಜೂ.12: ಉಡುಪಿಯಲ್ಲಿ ನರ್ಮ್ ಬಸ್‌ಗಳ ಸಂಚಾರವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈಗ ಜನರ ಓಡಾಟ ತೀರಾ ಕಡಿಮೆಯಾಗಿರು ವುದರಿಂದ ಅವುಗಳನ್ನು ಓಡಿಸುತ್ತಿಲ್ಲ. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳುವ ಹೊತ್ತಿಗೆ ಎಲ್ಲಾ ನರ್ಮ್ ಬಸ್‌ಗಳನ್ನು ಹಿಂದಿನಂತೆ ಓಡಿಸಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಈಗ ಕೆಲವು ನರ್ಮ್ ಬಸ್‌ಗಳು ಓಡುತ್ತಿವೆ. ಈಗ ಓಡುತ್ತಿರುವ ಖಾಸಗಿ ಮತ್ತು ನರ್ಮ್ ಬಸ್‌ಗಳೇ ಪ್ರಯಾಣಿಕರಿಲ್ಲದೇ ನಷ್ಟದಲ್ಲಿ ಓಡುತ್ತಿವೆ. ನಷ್ಟದ ಕಾರಣ ನರ್ಮ್ ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಉತ್ಸಾಹ ತೋರದ ಕಾರಣ, ಜನರ ಅನುಕೂಲಕ್ಕಾಗಿ ಖಾಸಗಿ ಬಸ್‌ಗಳ ಮಾಲಕರನ್ನು ಒಪ್ಪಿಸಿ ಅವುಗಳನ್ನು ಓಡಿಸಲಾಗುತ್ತಿದೆ. ಇನ್ನು ಕೆಎಸ್ಸಾರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸಿದರೆ ಎರಡೂ ಪ್ರಯಾಣಿಕರಿಲ್ಲದೇ ಮತ್ತೆ ಬಸ್ ಸಂಚಾರ ನಿಲ್ಲುವ ಸಾಧ್ಯತೆ ಇದೆ ಎಂದು ಭಟ್ ನುಡಿದರು.
ಉಡುಪಿಯಲ್ಲಿ ನರ್ಮ್ ಬಸ್‌ಗಳ ಓಡಾಟವನ್ನು ನಿಲ್ಲಿಸುವ ಹುನ್ನಾರ ನಡೆ ಯುತ್ತಿದೆ ಎಂಬ ಕಾಂಗ್ರೆಸ್‌ನವರ ಆರೋಪ ಸತ್ಯಕ್ಕೆ ದೂರವಾದುದು. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭಗೊಳ್ಳುತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಕೆಎಸ್ಸಾರ್ಟಿಸಿ, ನರ್ಮ್ ಬಸ್‌ಗಳನ್ನು ಓಡಿಸಲಾಗುವುದು ಎಂದವರು ಹೇಳಿದರು.
ನರ್ಮ್ ಬಸ್‌ಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವುದು ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು. ಇವರ್ಯಾರೂ ಕೋವಿಡ್-19 ಕಾರಣ ಕ್ಕಾಗಿ ಹೆಚ್ಚಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿಲ್ಲ. ಶಾಲಾರಂಭದ ಬಳಿಕ ವಿದ್ಯಾರ್ಥಿಗಳು ಸಂಚರಿಸುವುದರಿಂದ ಬಸ್‌ಗಳು ರಸ್ತೆಗಿಳಿಯಲಿವೆ. ಸುರಕ್ಷತಾ ಅಂತರ ಪಾಲನೆ ಹಾಗೂ ಇತರ ನಿಬಂಧನೆಗಳಿಂದ ಈಗ ಪ್ರಯಾಣಿಸುವವರ ಸಂಖ್ಯೆಯೇ ತೀರಾ ಕಡಿಮೆ ಇದೆ ಎಂದು ಅವರು ಸಮರ್ಥಿಸಿಕೊಂಡರು.
ಉಡುಪಿಯಲ್ಲಿ ಖಾಸಗಿ ಬಸ್ ಮಾಲಕರ ಲಾಬಿಯಿಂದಾಗಿ ನರ್ಮ್ ಬಸ್‌ಗಳನ್ನು ನಿಲ್ಲಿಸಲು ಉಡುಪಿ ಶಾಸಕರು ಹಾಗೂ ಬಿಜೆಪಿ ನಾಯಕರು ಪ್ರಯತ್ನಿಸುತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಶಾಸ ಭಟ್ ಪ್ರತಿಕ್ರಿಯೆ ನೀಡುತಿದ್ದರು.







