ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಉಡುಪಿ, ಜೂ.12: ಕಟಪಾಡಿ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ವತಿಯಿಂದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಎಲ್‌ಕೆಜಿ, ಯುಕೆಜಿ, ಒಂದನೆ ತರಗತಿ(ನಿಮ್ಮ ಇಷ್ಟದ ಚಿತ್ರ), 2, 3, 4ನೆ ತರಗತಿ(ಹೂವಿನ ಚಿತ್ರ), 5,6,7ನೆ ತರಗತಿ(ಪ್ರಕೃತಿಯ ಚಿತ್ರ), 8,9,10ನೆ ತರಗತಿ(ಕೊರೋನ ಜಾಗೃತಿ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಚಿತ್ರವನ್ನು ಜೂ.30ರೊಳಗೆ ದೇವಸುಮಾ, ಚಿಲ್ಮಿ ಹೌಸ, ಏಣಗುಡ್ಡೆ ಗ್ರಾಮ, ಕಟಪಾಡಿ- 574105, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು.
ಪ್ರತಿವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಕಾಮತ್(98864 32197) ಮತ್ತು ದೀಪಕ್ ಬೀರ(9964194767) ಅವರನ್ನು ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





