1.7 ಲಕ್ಷಕ್ಕೂ ಅಧಿಕ ಚೀನಾ ಪರ ಪ್ರಚಾರ ಖಾತೆಗಳನ್ನು ರದ್ದುಗೊಳಿಸಿದ ಟ್ವಿಟರ್: ಕಾರಣವೇನು ಗೊತ್ತೇ?

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜೂ. 12: ಚೀನಾ ಸರಕಾರದೊಂದಿಗೆ ನಂಟು ಹೊಂದಿರುವ 1,70,000ಕ್ಕೂ ಅಧಿಕ ಖಾತೆಗಳನ್ನು ತೆಗೆದುಹಾಕಿರುವುದಾಗಿ ಟ್ವಿಟರ್ ಗುರುವಾರ ಪ್ರಕಟಿಸಿದೆ. ಈ ಖಾತೆಗಳು ಕೊರೋನ ವೈರಸ್‌ಗೆ ಸಂಬಂಧಿಸಿದ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ಚೀನಾ ಸರಕಾರಕ್ಕೆ ಪೂರಕವಾಗಿರುವ ಸಂದೇಶಗಳನ್ನು ವಂಚನೆಯಿಂದ ಪ್ರಸಾರಿಸುತ್ತವೆ ಎಂದು ಅದು ತಿಳಿಸಿದೆ.
23,500 ಅತ್ಯಂತ ಸಕ್ರಿಯ ಖಾತೆಗಳನ್ನೊಳಗೊಂಡ ಕೋರ್ ನೆಟ್‌ವರ್ಕ್ ಹಾಗೂ ಸುಮಾರು 1,50,000 ‘ಆ್ಯಂಪ್ಲಿಫಯರ್’ ಖಾತೆಗಳನ್ನೊಳಗೊಂಡ ಲಾರ್ಜರ್ ನೆಟ್‌ವರ್ಕನ್ನು ಕಂಪೆನಿಯು ಸ್ಥಗಿತಗೊಳಿಸಿದೆ. ಕೋರ್ ಅಕೌಂಟ್‌ಗಳ ವಿಷಯಗಳನ್ನು ಹಿಗ್ಗಿಸುವುದಕ್ಕಾಗಿ ಆ್ಯಂಪ್ಲಿಫಯರ್ ಖಾತೆಗಳನ್ನು ಬಳಸಲಾಗುತ್ತಿತ್ತು.
ಈ ನೆಟ್‌ವರ್ಕ್ ನಕಲಿ ಖಾತೆಗಳನ್ನು ಪ್ರತಿಧ್ವನಿಸುವ ಕೆಲಸವನ್ನು ಮಾಡುತ್ತಿತ್ತು ಎನ್ನುವುದನ್ನು ಟ್ವಿಟರ್ ಮತ್ತು ಇತರ ಸಂಶೋಧಕರು ಕಂಡುಕೊಂಡಿದ್ದಾರೆ.
ಚೀನಾದಲ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮಗಳನ್ನು ನಿಷೇಧಿಸಲಾಗಿದೆ.
Next Story





