ಉಡುಪಿ ಜಿಲ್ಲೆಯಲ್ಲಿ ಜೂ.15ರಿಂದ ಜಲಮೂಲಗಳ ಸಮೀಕ್ಷಾ ಅಭಿಯಾನ
ಉಡುಪಿ, ಜೂ.12: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠಕ್ಕೆ ವರದಿ ನೀಡುವ ಸಲುವಾಗಿ ಜಿಲ್ಲೆಯ ವಿವಿಧ ಜಲಮೂಲಗಳ (ಕೆರೆಗಳ) ಸಮೀಕ್ಷೆಯನ್ನು ಗ್ರಾಮ ಪಂಚಾಯತ್ ಹಾಗೂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ಜಂಟಿಯಾಗಿ ಕೈಗೊಳ್ಳಲಿದ್ದು, ಈ ಜಲಮೂಲ ಸಮೀಕ್ಷಾ ಅಭಿಯಾನವನ್ನು ಜೂ.15ರಿಂದ 20 ರ ನಡುವೆ ಕೈಗೊಳ್ಳಲಾಗುತ್ತಿದೆ.
ಈ ಅಭಿಯಾನದಡಿ ಕೆರೆಗಳ ಸಮೀಕ್ಷೆಗಾಗಿ ಅಗಮಿಸುವ ತಂಡಕ್ಕೆ ಗ್ರಾಮಸ್ಥರು ಅಗತ್ಯ ಮಾಹಿತಿಗಳನ್ನು ಹಾಗೂ ಸಲಹೆಗಳನ್ನು ನೀಡಿ ಸಮೀಕ್ಷೆಯಲ್ಲಿ ಸಹಕರಿ ಸುವಂತೆ ಉಡುಪಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
Next Story





