ಅನಿಲ ಸಂಪರ್ಕ ಸ್ಥಗಿತಗೊಂಡ ಫಲಾನುಭವಿಗೆ ಆಧಾರ್ ಪ್ರತಿ ಸಲ್ಲಿಸಲು ಸೂಚನೆ
ಉಡುಪಿ, ಜೂ.12: ಬ್ರಹ್ಮಾವರದ ಅರ್ಚನ ಗ್ಯಾಸ್ ಏಜೆನ್ಸಿ ಮೂಲಕ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನಿಲ ಸಂಪರ್ಕ ಪಡೆದು, ನಂತರ ಸ್ಥಗಿತಗೊಂಡಿರುವ ಫಲಾನುಭವಿಗಳ ಅನಿಲ ಸಂಪರ್ಕವನ್ನು ಮರುಚಾಲನೆ ಪಡಿಸಲು ಫಲಾನುಭವಿಗಳ ಪಡಿತರ ಚೀಟಿ ಪ್ರತಿ, ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡಿನ ಪ್ರತಿಯನ್ನು ಸಂತೆಕಟ್ಟೆಯಲ್ಲಿರುವ ಶ್ರೀಗಣೇಶ್ ಗ್ಯಾಸ್ ಏಜೆನ್ಸಿ (0820-2581222) ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.
ಅರ್ಹರಿದ್ದಲ್ಲಿ ಪರಿಶೀಲಿಸಿ ಮರುಚಾಲನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
Next Story





