ಉಡುಪಿ: ವಿಶ್ವ ಬಾಲ ಕಾರ್ಮಿಕ ಪಧ್ದತಿ ವಿರೋಧಿ ದಿನಾಚರಣೆ

ಉಡುಪಿ, ಜೂ.12: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಕಾರ್ಮಿಕ ಇಲಾಖೆ,ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಘ ಮತ್ತು ಚೈಲ್ಡ್‌ಲೈನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ರಕ್ಷಿಸಲು ಎಂದಿಗಿಂತಲೂ ಹೆಚ್ಚು ಶ್ರಮಿಸೋಣ ಎಂಬ ಆಶಯದೊಂದಿಗೆ ಸರಳವಾಗಿ ವಿಶ್ವ ಬಾಲ ಕಾರ್ಮಿಕ ಪಧ್ದತಿ ವಿರೋಧಿ ದಿನಾಚರಣೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗದಲ್ಲಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತು ಅರಿವು ಮೂಡಿಸುವ ಭಿತ್ತಿಪತ್ರ ಹಾಗು ಕರಪತ್ರವನ್ನು ಬಿಡುಗಡೆ ಮಾಡಿ ಆಟೋ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಕಾರ್ಮಿಕ ಅಧಿಕಾರಿಅಮರೇಂದ್ರ, ಬಾಲನ್ಯಾಯ ಮಂಡಳಿ ಸದಸ್ಯೆ ಅಮೃತಾಕಲಾ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾಬಾಲರ್ಕಾುಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಪೂರ್ಣಿಮಾ ಭಾನುಪ್ರಕಾಶ್, ಚೈಲ್ಡ್‌ಲೈನ್ ಉಡುಪಿ ನಿರ್ದೇಶಕರಾಮಚಂದ್ರ ಉಪಾಧ್ಯಾಯ, ಮಕ್ಕಳ ಕಲ್ಯಾಣ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಿ.ಕೆ ನಾರಾಯಣ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಅಧೀಕ್ಷಕ ದಯಾನಂದ ನಾಯಕ್, ಜಿಲ್ಲಾ ಮಕ್ಕಳ ಘಟಕದ ಕಾನೂನು ಪರೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಉಪಸ್ಥಿತರಿದ್ದರು.







