ಎಸ್.ಡಿ.ಪಿ.ಐ.ಯಿಂದ ಜುಮಾ ನಮಾಝ್ ಗೆ ಆಗಮಿಸಿದವರ ದೇಹದ ಉಷ್ಣಾಂಶ ತಪಾಸಣೆ

ಬಂಟ್ವಾಳ, ಜೂ.12: ಕೋವಿಡ್ - 19 (ಕೊರೋನ) ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ (ಎಪ್ರಿಲ್ 23)ಯಾದ ಬಳಿಕ ಇಂದು ತಾಲೂಕಿನ ಕೆಲವು ಮಸೀದಿಗಳಲ್ಲಿ ಜುಮಾ ನಮಾಝ್ ನೆರವೇರಿತು.
ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಆಲಾಡಿ ಬದ್ರಿಯಾ ಜುಮಾ ಮಸೀದಿಗೆ ಇಂದು ಜುಮಾ ನಮಾಝ್ ನಿರ್ವಹಿಸಲು ಆಗಮಿಸಿದವರಿಗೆ ಎಸ್.ಡಿ.ಪಿ.ಐ. ಆಲಾಡಿ ಸಮಿತಿಯ ವತಿಯಿಂದ ದೇಹದ ತಾಪಮಾನ ಪರೀಕ್ಷೆ ನಡೆಸಲಾಯಿತು. ಅಲ್ಲದೆ ಉಚಿತ ಮಾಸ್ಕ್ ವಿತರಿಸಲಾಯಿತು.
ಈ ವೇಳೆ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಲೀಮ್ ಆಲಾಡಿ, ಗ್ರಾಮ ಸಮಿತಿ ಅಧ್ಯಕ್ಷ ಉಮರ್ ಫಾರೂಕ್ ಆಲಾಡಿ, ಆಲಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಚ್ಚಿಗುಡ್ಡೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಲಾಡಿ ಯುನಿಟ್ ಸದಸ್ಯ ಇಸಾಕ್ ಕೊಪ್ಪಳ ಉಪಸ್ಥಿತರಿದ್ದರು.











