ಕಾಬೂಲ್: ಮಸೀದಿಯಲ್ಲಿ ಸ್ಫೋಟ; 4 ಸಾವು
ಕಾಬೂಲ್ (ಅಫ್ಘಾನಿಸ್ತಾನ), ಜೂ. 12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದಾಗ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ನಮಗೆ ಲಭಿಸಿರುವ ಆರಂಭಿಕ ಮಾಹಿತಿಗಳ ಅನ್ವಯ, ಮಸೀದಿಯ ಒಳಗೆ ಇರಿಸಲಾಗಿದ್ದ ಸ್ಫೋಟಕಗಳು ಮಧ್ಯಾಹ್ನ ಪ್ರಾರ್ಥನೆಯ ವೇಳೆಗೆ ಸ್ಫೋಟಿಸಿದವು’’ ಎಂದು ದೇಶದ ಆಂತರಿಕ ಸಚಿವಾಲಯವ ವಕ್ತಾರ ತಾರಿಖ್ ಅರಿಯಾನ್ ಸುದ್ದಿಗಾರರಿಗೆ ತಿಳಿಸಿದರು.
ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.
Next Story





