ಬೈಕ್ ಢಿಕ್ಕಿ: ಕೂಲಿಕಾರ್ಮಿಕ ಸಾವು
ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಬಸ್‌ಗೆಂದು ಕಾಯುತ್ತಿದ್ದ ಕೂಲಿಕಾರ್ಮಿಕನೋರ್ವನಿಗೆ ಬೈಕ್ ಢಿಕ್ಕಿಹೊಡೆದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಮೂಲತಃ ಗದಗದ ಶಿರಹಟ್ಟಿ ತಾಲೂಕು ನಿವಾಸಿ ಪ್ರಸ್ತುತ ನಿಡಿಗಲ್‌ನಲ್ಲಿ ವಾಸವಿದ್ದ ಬೀರೇಶ್ ಅಲಿಯಾಸ್ ಫಕೀರಪ್ಪ 48 ಮೃತಪಟ್ಟ ವ್ಯಕ್ತಿ.
ಉಜಿರೆಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಇಂದಬೆಟ್ಟು ನಿವಾಸಿ ಕಾರ್ತಿಕ್ 22 ಎಂಬಾತ ಚಲಾಯಿಸುತ್ತಿದ್ದ ಬೈಕ್ ಉಜಿರೆ ಪೇಟೆಯಲ್ಲಿ ಢಿಕ್ಕಿ ಹೊಡೆದಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಿಂದ ಮಂಗಳೂರು ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾರ್ತಿಕ್ ಅವರಿಗೂ ಗಂಭೀರ ಗಾಯ ವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





