ಲಾರಿಯಿಂದ ಬ್ಯಾಟರಿ ಕಳವು ಪ್ರಕರಣ: ಆರೋಪಿಗಳ ಬಂಧನ
ಪುತ್ತೂರು : ಕಬಕ ಎಂಬಲ್ಲಿ ಬಾಡಿಗೆ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಬ್ಯಾಟರಿ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿ ಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೋವಿಡ್ ಪರೀಕ್ಷೆಗೊಳಿಸುವ ನಿಟ್ಟಿನಲ್ಲಿ ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಕ್ವಾರಂಟೈನ್ ಬಂಧನಕ್ಕೊಳಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಓಜಾಲ ನಿವಾಸಿ ಮಹಮ್ಮದ್ ತೌಫಿಕ್ (23) ಮತ್ತು ಮೂಲತಃ ನರಿಮೊಗರು ಪುರುಷರಕಟ್ಟೆ ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರು ಕೆಂಜಾರುವಿನಲ್ಲ ವಾಸ್ತವ್ಯ ಇರುವ ಮಹಮ್ಮದ್ ಇಮ್ರಾನ್ (24) ಬಂಧಿತ ಆರೋಪಿಗಳು. ಆರೊಪಿಗಳನ್ನು ಪೊಲೀಸರು ಮಂಗಳವಾರ ದರ್ಬೆಯಲ್ಲಿ ಬಂಧಿಸಿದ್ದಾರೆ.
Next Story





